ಪ್ರಜಾಸ್ತ್ರ ಸುದ್ದಿ
ತುಮಕೂರು(Tumakuru): ಇವತ್ತಿನ ದಿನಮಾನಗಳಲ್ಲಿ ಸುಲಭವಾಗಿ ಹಣ ಡಬಲ್ ಮಾಡಿಕೊಳ್ಳಲು ನಾನಾ ದಾರಿಗಳನ್ನು ಜನರು ನೋಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಮೋಸಗಾರರು(Cheaters), ವಂಚಕರು ಆನ್ಲೈನ್(Online) ಮೂಲಕ ಗಾಳ ಹಾಕಿ ಜನರಿಗೆ ನಾಮ ಹಾಕುತ್ತಿದ್ದಾರೆ. ಇಂತಹ ಆನ್ಲೈನ್ ವಂಚನೆಗೆ ಇಡೀ ಊರಿಗೆ ಊರೇ ಬಲಿಯಾದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಲ್ಲೂರಿನಲ್ಲಿ ನಡೆದಿದೆ. ಹೀಗಾಗಿ ಗ್ರಾಮಸ್ಥರೆಲ್ಲ ಪೊಲೀಸ್ ಠಾಣೆ ಬಂದು ದೂರು ಕೊಡುವ ಪರಿಸ್ಥಿತಿ ಬಂದಿದೆ.
ಸಿಲಿಕಾನ್ ಸಿಟಿಯ ವ್ಯಕ್ತಿಯೊಬ್ಬರ ಕಲ್ಲೂರಿನ ಜನರಿಗೆ ಡಾಟಾಮೀರ್ ಎಐ ಆಪ್ ಮೂಲಕ ಹಣ(Money) ಡಬಲ್ ಮಾಡುವ ವಿಚಾರ ತಿಳಿಸಿದ್ದಾನೆ. ಆಪ್ ಮೂಲಕ ಹಣ ಹೂಡಿಕೆ ಮಾಡಿದ ಡಬಲ್ ಆಗುತ್ತೆ ಎಂದು ಹೇಳಿ ಹೂಡಿಕೆ ಮಾಡಿಸಲಾಗಿದೆ. ಇದರಿಂದಾಗಿ ಒಬ್ಬರಿಂದ ಒಬ್ಬರು ಎನ್ನುವಂತೆ ಗ್ರಾಮದ 500 ಜನರು ಹೂಡಿಕೆ(Investment) ಮಾಡಿದ್ದಾರೆ. ಆರಂಭದಲ್ಲಿ ಸಣ್ಣ ಮೊತ್ತ ಹಾಕಿದ್ದಾರೆ. ಅದು ಅವರಿಗೆ ಡಬಲ್ ಆಗಿ ವಾಪಸ್ ಆಗಿದೆ. ಹೀಗಾಗಿ ಸಾವಿರದಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆಗ ಅದು ವಾಪಸ್ ಬಂದಿಲ್ಲ. ಹೀಗಾಗಿ ಶುಕ್ರವಾರ ಸಿ.ಎಸ್ ಪುರ ಪೊಲೀಸ್ ಠಾಣೆಯ ಮುಂದೆ ಗ್ರಾಮಸ್ಥರು ಜಮಾಯಿಸಿ ತಮಗೆ ಆದ ಮೋಸ ಹೇಳಿಕೊಂಡಿದ್ದಾರೆ.
ಆರಂಭದಲ್ಲಿ ಹಣ ಹಾಕಿದಂತೆ ಮಾಡಿದ ಅವರು ಮುಂದೆ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಇದರ ಪರಿಣಾಮ ಒಡೆವೆ ಅಡ ಇಟ್ಟು ಹಣ ಹಾಕಿದವರು, ಲಕ್ಷಂತಾರ ರೂಪಾಯಿ ಹೂಡಿಕೆ ಮಾಡಿದವರು ಈಗ ತಲೆ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂತಹ ಮೋಸದ ಜಾಲಕ್ಕೆ ಸಿಕ್ಕಿಬೀಳುವ ಮುನ್ನ ಎಚ್ಚರಿಕೆಯಿಂದ ಇರಬೇಕು.