ಪ್ರಜಾಸ್ತ್ರ ಸುದ್ದಿ
ಲಖನೌ(lucknow): ಪತಿ ಮಾಂಸಾಹಾರದ ಊಟ ಬಡಿಸುವಂತೆ ಕೇಳಿದ್ದಕ್ಕೆ ಪತ್ನಿ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನಪುರದಲ್ಲಿ(shahjahanpur)ಶುಕ್ರವಾರ ನಡೆದಿದೆ. ಸತ್ಯಪಾಲ್(42) ಕೊಲೆಯಾದ ವ್ಯಕ್ತಿ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಗನ ಹೇಳಿಕೆ ಆಧಾರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದು, ವೈದ್ಯರ ಸಲಹೆ ಪಡೆಯುವ ಕುರಿತು ಪೊಲೀಸರು ತಿಳಿಸಿದ್ದಾರೆ.
ಮದ್ಯಪಾನ ಮಾಡಿ ಬಂದಿದ್ದ ಸತ್ಯಪಾಲ್ ಮಾಂಸಾಹಾರದ ಊಟ ಬಡಿಸುವಂತೆ ಕೇಳಿದ್ದಾನೆ. ಇದೇ ವಿಚಾರವಾಗಿ ಗಲಾಟೆಯಾಗಿದೆ. ಶ್ರಾವಣ ತಿಂಗಳು ಇದೆ. ಮಾಂಸಾಹಾರ ಮಾಡಲ್ಲ ಎಂದು ಹೇಳಿದ್ದಾಳೆ. ಆಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ(Wife) ಇಟ್ಟಿಗೆ ತೆಗೆದುಕೊಂಡು ತಲೆಗೆ ಜೋರಾಗಿ ಹೊಡಿದ್ದಾಳೆ. ನಂತರ ಅವನ ತಲೆಗೆ ನಿರಂತರವಾಗಿ ಹೊಡೆದಿದ್ದಾಳೆ. ಆಗ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.