ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಪ್ರವೀಣ್ ಬೊಕ್ಕೆ ಎಂಬುವರ ವಿರುದ್ಧ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ. ಅಳಿಯ ಹಾಗೂ ಅವನ ಕುಟುಂಬಸ್ಥರು ಮಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ನಗರ ಮಹಿಳಾ ಪೊಲೀಸ್ ಠಾಣೆ ಹಾಗೂ ಹಾಗೂ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವನ ಇಲಾಖೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೀದರ್ ಮೂಲದ ಪ್ರವೀಣ ಬೊಕ್ಕೆ ವಿಜಯಪುರದಲ್ಲಿ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ. ಹುಮನಾಬಾದ್ ಪಟ್ಟಣದ ಪ್ರಿಯಾಂಕಾ ಬೋಯಿ ಎಂಬುವರ ಜೊತೆ ಏಪ್ರಿಲ್ 15, 2022ರಂದು ಮದುವೆಯಾಗಿದೆ. ಈ ವೇಳೆ ವರನಿಗೆ 10 ಲಕ್ಷ ರೂಪಾಯಿ, 110 ಗ್ರಾಂ ಚಿನ್ನ ನೀಡಿದ್ದಾರಂತೆ. ಮದುವೆಗಾಗಿ 25-30 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ. ಇವರಿಗೆ ಒಂದು ಹೆಣ್ಣು ಮಗುವಿದೆ. ಗಂಡ ಹಾಗೂ ಆತನ ಮನೆಯವರು ತವರು ಮನೆಯಿಂದ ಹಣ ತಗೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಿಕೊಂಡು ಹೋಗಿದ್ದಾಳಂತೆ. ಗಂಡನಿಗೆ ಅಕ್ರಮ ಸಂಬಂಧವಿದೆ ಎಂದು 2 ತಿಂಗಳ ಹಿಂದೆ ತಿಳಿದು, ಗಲಾಟೆಯಾಗಿದೆಯಂತೆ.
ಪ್ರಿಯಂಕಾಳನ್ನು ಮನೆಯಿಂದ ಹೊರ ಹಾಕಿದ್ದು, ತವರು ಮನೆಗೆ ಬಂದಿದ್ದಾಳೆ. ಮಗಳ ಜೀವನ ಹಾಳು ಮಾಡಬೇಡ ಎಂದು ಅಳಿಯನಿಗೆ ಕೇಳಿಕೊಂಡರೂ ಆತನ ಮನಸ್ಸು ಬದಲಾಗಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಅಳಿಯ, ಅತ್ತೆ, ಮಾವ, ಮೈದುನ, ನಾದಿನಿ ಹಾಗೂ ಈಕೆಯ ಗಂಡನ ವಿರುದ್ಧ ದೂರು ದಾಖಲಿಸಿದ್ದು, ನ್ಯಾಯ ಕೊಡಿಸಿ ಎನ್ನುತ್ತಿದ್ದಾರೆ. ಆದರೆ, ಕೆಲವರು ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ. ಸತ್ಯ ಏನು ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.