ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದ ಮಹಿಳೆ ಪ್ರಯಾಣ ಮಾಡುತ್ತಿದ್ದಳು. ಆದರೆ ಆಟೋ ಚಾಲಕ ತಪ್ಪಾದ ಕಡೆ ಹೊರಟಿದ್ದಾನೆ. ಆಕೆ ಇದು ಬೇರೆ ಮಾರ್ಗ ಎಂದು ಹೇಳಿದರೂ ಕೇಳದೆ ಆಟೋ ಚಲಾಯಿಸಿಕೊಂಡು ಹೋಗಿದ್ದಾನೆ. ಇದರಿಂದ ಭಯಗೊಂಡು ಮಹಿಳಾ ಆಟೋದಿಂದ ಜಿಗಿದು ತಪ್ಪಿಸಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಈ ಕುರಿತು ಮಹಿಳೆಯ ಪತ್ತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮೊದಲು ಸುರಕ್ಷಕತೆ ಎಂದಿದ್ದಾರೆ. ನಮ್ಮ ಯಾತ್ರೆ ಆ್ಯಪ್ ಮೂಲಕ ನನ್ನ ಪತ್ನಿ ಹೊರಮಾವುದಿಂದ ತಣಿಸಂದ್ರ ತನಕ ಆಟೋ ಬುಕ್ ಮಾಡಿದ್ದಾಳೆ. ಮದ್ಯಪಾನ ಮಾಡಿದ್ದ ಆಟೋ ಚಾಲಕ ತಪ್ಪಾದ ಕಡೆ ಕರೆದುಕೊಂಡು ಹೊರಟಿದ್ದಾನೆ. ಆಕೆ ಎಷ್ಟೇ ಹೇಳಿದರೂ ಕೇಳದೆ ಹೆಬ್ಬಾಳ ಹತ್ತಿರ ಹೋಗುತ್ತಿದ್ದಾಗ ಆಟೋದಿಂದ ಜಿಗಿದಿದ್ದಾರೆ ಎಂದು ಬರೆದಿದ್ದಾರೆ.
https://twitter.com/AzharKh35261609/status/1874961960372252871