ಪ್ರಜಾಸ್ತ್ರ ಸುದ್ದಿ
ವಡೋದರ್(Vadodara): ಇಲ್ಲಿನ ಕೊಟಂಬಿ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ಪಡೆ ಅಬ್ಬರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕಿ ಹರ್ಮನ್ ಪ್ರೀತ್ ಕೌರ್ ಪ್ಲಾನ್ ಸಕ್ಸಸ್ ಮಾಡಿದ್ದಾರೆ. ಸ್ಮೃತಿ ಮಂದಾನಾ 53, ಪ್ರತಿಕಾ ರವಲ್ 76, ಹರ್ಲನ್ ಡಿಯೋಲ್ ಬರೋಬ್ಬರಿ 115, ಜೆಮಿಮಾ ರಾಡಿಗ್ರಸ್ 52 ರನ್ ಗಳ ಆಟದಿಂದಾಗಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 358 ರನ್ ಕಲೆ ಹಾಕಿದೆ. ವೆಸ್ಟ್ ಇಂಡೀಸ್ ಬೌಲರ್ ಗಳನ್ನು ಭರ್ಜರಿಯಾಗಿ ದಂಡಿಸುವ ಮೂಲಕ 300ರ ಗಡಿ ದಾಟಿತು.
2017ರಲ್ಲಿ ಐರ್ಲೆಂಡ್ ವಿರುದ್ಧ ಇಷ್ಟೇ ರನ್ ಗಳಿಸಿತ್ತು. ಅದನ್ನು ಸರಿಗಟ್ಟಲಾಯಿತು. ಹರ್ಲಿನ್ ಡಿಯೋಲ್ 6 ವರ್ಷಗಳ ಬಳಿಕ ಚೊಚ್ಚಲ ಏಕದಿನ ಶತಕ ಸಿಡಿಸಿದರು. ನಾಲ್ವರ ಅಬ್ಬರದ ಬ್ಯಾಟಿಂಗ್ ನಿಂದ ಭಾರತೀಯ ಮಹಿಳಾ ಪಡೆ ಈ ಸಾಧನೆ ಮಾಡಿತು. ಮೊದಲ ಪಂದ್ಯದಲ್ಲಿ ಗೆದ್ದು 1-0ದಿಂದ ಮುನ್ನಡೆಯಲ್ಲಿದ್ದು 2ನೇ ಪಂದ್ಯ ಗೆದ್ದು 1 ಪಂದ್ಯ ಮೊದಲೇ ಸರಣಿ ಕೈವಶ ಪಡಿಸಿಕೊಳ್ಳುವ ಲೆಕ್ಕಾಚಾರವಿದೆ. ದೊಡ್ಡ ಗುರಿ ಬೆನ್ನು ಹತ್ತಿರುವ ವೆಸ್ಟ್ ಇಂಡೀಸ್ ಪಡೆ ಸಧ್ಯ 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ.