ಪ್ರಜಾಸ್ತ್ರ ಸುದ್ದಿ
ಗಾಂಧಿನಗರ(Gandhinagara): ಕಳೆದ 100 ದಿನಗಳಲ್ಲಿ ನಮ್ಮ ಸರ್ಕಾರದ ವೇಗ, ಆದ್ಯತೆ ಹಾಗೂ ದಾರಿಯನ್ನು ನೀವು ನೋಡಬಹುದು. 21ನೇ ಶತಮಾನಕ್ಕೆ ಭಾರತವೇ ಉತ್ತಮವೆಂದು ಬರೀ ಭಾರತೀಯರಲ್ಲ ಇಡೀ ವಿಶ್ವವೇ ಭಾವಿಸಿದೆ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದರು. ಗಾಂಧಿನಗರದಲ್ಲಿ ನಡೆದ ಗ್ಲೋಬಲ್ ರಿನ್ಯೂವಬಲ್ ಎನರ್ಜಿ ಇನ್ವೆಸ್ಟರ್ಸ್ ಮೀಟ್ ಅಂಡ್( global renewables energy investment meet and expo-2024) ಎಕ್ಸ್ ಪೋ 4ನೇ ಆವೃತ್ತಿ ಉದ್ದೇಶಿಸಿ ಮಾತನಾಡಿದರು.
ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ಭಾರತದ ಅಡಿಪಾಯ ಸಿದ್ಧವಾಗುತ್ತಿದೆ. ಹಸಿರು ಭವಿಷ್ಯ ಹಾಗೂ ನಿವ್ವಳ ಶೂನ್ಯ ನಮಗೆ ಕೇವಲ ಅಲಂಕಾರದ ಪದಗಳಲ್ಲ. ದೇಶದ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ. 140 ಕೋಟಿ ಭಾರತೀಯರು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ದೇಶ ಮಾಡಲು ಪಣ ತೊಟ್ಟಿದ್ದಾರೆ ಅಂತಾ ಹೇಳಿದರು.