ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ 14ನೇ ಕ್ರಾಸ್ ನಲ್ಲಿರುವ ಕೆಎಚ್ ಬಿ ಕಾಲೋನಿಯಲ್ಲಿರುವ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸಚಿನ್ ಕೌಶಿಕ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ನ್ಯಾಯಾಧೀಶರಿದ್ದ ಬಾಡಿಗೆ ಮನೆಯಲ್ಲಿ ಬರೋಬ್ಬರಿ 30.14 ಲಕ್ಷ ಮೊತ್ತದ ಚಿನ್ನಾಭರಣ, ವಜ್ರ, ಬೆಳ್ಳಿ ಹಾಗೂ 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಭಾನುವಾರ ಹಾಗೂ ಸೋಮವಾರದ ನಡುವೆ ಈ ಕಳ್ಳತನ ನಡೆದಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳತನ ಸಂಬಂಧ ಸಿಪಿಐ ಮೊಹ್ಮದ್ ಫಸಿಯುದ್ದೀನ್ ನೇತೃತ್ವದಲ್ಲಿ ಪಿಎಸ್ಐ ಸಂಜಯ ತಿಪರೆಡ್ಡಿ ಅವರನ್ನೊಳಗೊಂಡ ತನಿಖಾ ತಂಡ ರಚನೆ ಮಾಡಲಾಗಿದೆ. ಪರಿಚಿತರಿಂದಲೇ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ.