ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ಪ್ಯಾರಿಸ್(Paris) ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೀಶಾ ಫೋಗೆಟ್(Vinesh phogat) ಅವರನ್ನು ಅನರ್ಹಗೊಳಿಸಿರುವುದರ ಹಿಂದೆ ದೊಡ್ಡ ಸಂಚು ನಡೆದಿದೆ ಎಂದು 2008ರ ಬೀಜಿಂಗ್ ಒಲಿಂಪಿಕ್ಸ್ ಪದಕ ವಿಜೇತ, ಮಾಜಿ ಬಾಕ್ಸರ್ ವಿಜೇಂದರ್(boxer vijender singh) ಸಿಂಗ್ ಹೇಳಿದ್ದಾರೆ. 100 ಗ್ರಾಂ ದೊಡ್ಡ ಸಮಸ್ಯೆಯೇ ಅಲ್ಲ. ಯಾರಿಗೋ ಏನೋ ಸಮಸ್ಯೆಯಾಗಿದೆ. ಆದ್ದರಿಂದಲೇ ಅನರ್ಹಗೊಳಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಒಂದೇ ರಾತ್ರಿ ಐದಾರು ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಹೀಗಿರುವಾಗ 100 ಗ್ರಾಂ ಯಾವ ಲೆಕ್ಕ. ಓರ್ವ ಕ್ರೀಡಾಪಟುವಾಗಿ ಇಂತಹ ಘಟನೆಯನ್ನು ನಾನು ಎಂದೂ ಕಂಡಿಲ್ಲ. ತೂಕ ಇಳಿಸಿಕೊಳ್ಳಲು ಬಾಕ್ಸರ್ ಗಳಿಗೆ ಒಂದು ಗಂಟೆಗೂ ಹೆಚ್ಚು ಸಮಯ ಕೊಡುತ್ತಾರೆ. ಆಕೆಗೆ ಅವಕಾಶ ನೀಡಬೇಕಿತ್ತು. ಈ ಬಗ್ಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದಾರೆ. ಆದರೆ, ಇದುವರೆಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಿಂದ ಮೇಲ್ಮನವಿ ಸಲ್ಲಿಸುವ ಕೆಲಸವಾಗಿಲ್ಲವೆಂದು ಹೇಳಲಾಗುತ್ತಿದೆ.