ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಪ್ರಯಾಣಿಕರ ಹಿತದೃಷ್ಟಿಯಿಂದ ಮೇ 13ರಂದು ದೇಶದ 6 ನಗರಗಳಲ್ಲಿ ಇಂಡಿಗೊ ಏರ್ ಲೈನ್ಸ್ ವಿಮಾನ ಹಾರಾಟ ಇರುವುದಿಲ್ಲವೆಂದು ಸಂಸ್ಥೆ ತಿಳಿಸಿದೆ. ಜಮ್ಮು, ಶ್ರೀನಗರ, ಲೇಹ್, ಅಮೃತಸರ, ಚಂಡೀಗಢ ಹಾಗೂ ರಾಜ್ ಕೋಟ್ ಗೆ ತೆರಳಬೇಕಿದ್ದ ವಿಮಾನಗಳ ಹಾರಾಟ ಇಂದು ಇರುವುದಿಲ್ಲವೆಂದು ತಿಳಿಸಿದೆ. ಸೋಮವಾರ ರಾತ್ರಿ ಈ ಬಗ್ಗೆ ಎಕ್ಸ್ ನಲ್ಲಿ ತಿಳಿಸಲಾಗಿದೆ. ಇದರಿಂದ ನಿಮಗೆ ಸಮಸ್ಯೆಯಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ವೆಬ್ ಸೈಟ್, ಅಪ್ಲಿಕೇಷನ್ ಪರಿಶೀಲನೆ ಮಾಡಿ. ನಿಮಗೆ ಸಹಾಯ ಮಾಡಲು ನಾವು ಸಿದ್ಧವೆಂದು ಹೇಳಿದೆ.