Ad imageAd image

ಯೂರಿಯಾ ಗೊಬ್ಬರ ಕೊರತೆಯಿಲ್ಲ: ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ

ಪಟ್ಟಣದ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಏಪ್ರಿಲ್ 6ರಂದು  ಕೃಷಿ ಇಲಾಖೆ ವತಿಯಿಂದ ರಸಗೊಬ್ಬರ ಮಾರಾಟಗಾರರ ಸಭೆಯನ್ನು ಮಾಡಲಾಗಿದೆ.

Nagesh Talawar
ಯೂರಿಯಾ ಗೊಬ್ಬರ ಕೊರತೆಯಿಲ್ಲ: ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಏಪ್ರಿಲ್ 6ರಂದು  ಕೃಷಿ ಇಲಾಖೆ ವತಿಯಿಂದ ರಸಗೊಬ್ಬರ ಮಾರಾಟಗಾರರ ಸಭೆಯನ್ನು ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಜಂಟಿ ಕೃಷ್ಟಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಂಗಾರು ಹಂಗಾಮಿಗೆ ಬೇಕಾಗುವ ಯೂರಿಯಾ ಗೊಬ್ಬರದ ವಿತರಣೆ ಕುರಿತು ಜಾಗೃತಿ ಮೂಡಿಸಲಾಯಿತು. ರೈತರಿಗೆ ಕೃಷಿ ಇಲಾಖೆಯ ಆ್ಯಪ್ ಮೂಲಕ ಯೂರಿಯಾ ವಿತರಿಸಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗ್ಲೇ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ದಾಸ್ತಾನು ಇದೆ. ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಎಫ್ಐಡಿ ಮೂಲಕ ರೈತರು ಗೊಬ್ಬರ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದರು. ಇನ್ನು ಇಂಡಿಯ ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ, ಯೂರಿಯಾ ವಿತರಣೆಯಲ್ಲಿ ರೈತರು, ರಸಗೊಬ್ಬರ ವಿತರಕರು ಹಾಗೂ ಅಧಿಕಾರಿಗಳು ಸಮನ್ವಯ ಸಾಧಿಸಬೇಕು. ಅನ್ಯಕಾರ್ಯಗಳಿಗೆ ಯೂರಿಯಾ ಬಳಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಿಂದಗಿಯ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ ಸಾಣೆ ಮಾತನಾಡಿ, ತಾಲೂಕಿನಲ್ಲಿ ಈಗಾಗ್ಲೇ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಲಭ್ಯವಿದೆ. ರೈತರು ಪ್ರುಟ್ಸ್ ಐಡಿ ಮೂಲಕ ಗೊಬ್ಬರ ತೆಗೆದುಕೊಂಡು ಹೋಗಬಹುದು. ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ಪರವಾನಿಗೆ ರದ್ದುಗೊಳಿಸಲಾಗುವುದು ಎಂದರು. ಈ ವೇಳೆ 150ಕ್ಕೂ ಹೆಚ್ಚು ರಸಗೊಬ್ಬರ ಮಾರಾಟಗಾರರು, ಕೃಷಿ ಪರಿಕರ ಮಾರಾಟಗಾರರ ಅಧ್ಯಕ್ಷರಾದ ಸುರೇಶ ಮಳಲಿ, ಮನೋಜ ವಾರದ, ಕೃಷ್ಟಿ ಅಧಿಕಾರಿಗಳಾದ ಶಿವಾನಂದ ಹೂವಿನಳ್ಳಿ, ಅನಿಲದೇವ ದಶವಂತ, ಶರಣಗೌಡ ಬಿರಾದಾರ ಸೇರಿ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article