Ad imageAd image

ಈ ಬಂಡೆ ಸಿದ್ದರಾಮಯ್ಯನವರ ಜೊತೆ ಸದಾ ಇರುತ್ತೆ: ಡಿಸಿಎಂ ಡಿಕೆಶಿ

ಕೆಪಿಸಿಸಿ ಹಾಗೂ ಸ್ವಾಭಿಮಾನಿಗಳ ಒಕ್ಕೂಟದ ವತಿಯಿಂದ ಗುರುವಾರ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್,

Nagesh Talawar
ಈ ಬಂಡೆ ಸಿದ್ದರಾಮಯ್ಯನವರ ಜೊತೆ ಸದಾ ಇರುತ್ತೆ: ಡಿಸಿಎಂ ಡಿಕೆಶಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹಾಸನ(Hasana): ಕೆಪಿಸಿಸಿ ಹಾಗೂ ಸ್ವಾಭಿಮಾನಿಗಳ ಒಕ್ಕೂಟದ ವತಿಯಿಂದ ಗುರುವಾರ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್, ಈ ಬಂಡೆ ಸಿದ್ದರಾಮಯ್ಯನವರ ಜೊತೆ ಸದಾ ಇರುತ್ತೆ. ಇಂದು, ಮುಂದೆ, ಎಂದೆಂದಿಗೂ ಇರುತ್ತದೆ. ಈ ಬಗ್ಗೆ ನೀವು ಚಿಂತೆ ಮಾಡಬೇಡಿ ಎನ್ನುವ ಮೂಲಕ ವಿಪಕ್ಷಗಳ ನಾಯಕರಿಗೆ ಛಾಟಿ ಬೀಸಿದರು.

ನಮ್ಮ ಐದು ಗ್ಯಾರೆಂಟಿಗಳು ಶಾಶ್ವತ. 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ವಿರೋಧ ಪಕ್ಷಗಳಿಗೆ ಉಪ ಚುನಾವಣೆಯಲ್ಲಿ ಜನರು ಉತ್ತರ ನೀಡಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಮುಂದೆ ಹಾಸನ ಜಿಲ್ಲೆಯಲ್ಲಿಯೂ ಗೆಲುವು ದಾಖಲಿಸಲಿದೆ. ತಾಯಿಯಂದಿರ ಸ್ವಾಭಿಮಾನ ಉಳಿಸಲು ಇಲ್ಲಿ ಸಮಾವೇಶ ಮಾಡಿದ್ದೇವೆ. ನೊಂದ ತಾಯಿಯಂದಿರಗೆ ಧೈರ್ಯ ನೀಡಲು ಶ್ರೇಯಸ್ ಪಟೇಲ ಅವರಿಗೆ ಆಶೀರ್ವಾದ ಮಾಡಿ ಸಂಸದರನ್ನಾಗಿ ಮಾಡಿದ್ದಾರೆ.

ನಾವು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಲ್ಲ. ಅವರ ಜೀವನದ ಸಲುವಾಗಿ ರಾಜಕಾರಣ ಮಾಡುತ್ತೇವೆ. ಇಂದಿರಾ ಗಾಂಧಿ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ. ಅರಸು ಅವರಿದ್ದಾಗ ಊಳುವವನೆ ಭೂಮಿ ಒಡೆಯ ಯೋಜನೆ. ಮನಮೋಹನ್ ಸಿಂಗ್ ಅವರಿದ್ದಾಗ ತಂತ್ರಜ್ಞಾನ ಕ್ರಾಂತಿ, ಆಹಾರ ಭದ್ರತೆ, ಉದ್ಯೋಗ ಖಾತರಿ ತರಲಾಯಿತು. ಹೀಗೆ ಕಾಂಗ್ರೆಸ್ ಯೋಜನೆಗಳು ಶಾಶ್ವತ ಎಂದರು.

WhatsApp Group Join Now
Telegram Group Join Now
Share This Article