ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕಟು ಟೀಕೆಗಳನ್ನು ಸ್ವಪಕ್ಷೀಯ ಕೆಲವು ನಾಯಕರು ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪನವರ ತೇಜೋವಧೆ ಮಾಡುವವರ ಬಾಯಿಯನ್ನು ತಟಸ್ಥ ಇರುವವರು ಮುಚ್ಚಿಸಲಿ. ಅವರು ಮಧ್ಯಸ್ಥಿಕೆ ಯಾಕೆ ವಹಿಸುತ್ತಿಲ್ಲ. ತಟಸ್ಥ ಬಣದ ಬಗ್ಗೆಯೂ ಗೊತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಬೆಳವಣಿಗೆಯಲ್ಲಿ ಯಡಿಯೂರಪ್ಪನವರ ಕೊಡುಗೆ ಏನೂ ಇಲ್ಲವೇ ಎಂದು ಪ್ರಶ್ನಿಸಿದರು. ನನಗೆ ಅಪಮಾನ ಮಾಡಲಿ. ಸಹಿಸಿಕೊಳ್ಳುತ್ತೇನೆ. ಯಡಿಯೂರಪ್ಪನವರ ವಿರುದ್ಧ ಕೀಳು ಮಟ್ಟದಲ್ಲಿ ತೋಜೋವಧೆ ಮಾಡುವುದನ್ನು ಸಹಿಸುವುದಿಲ್ಲ. ಅಡ್ರಸ್ ಗೆ ಇಲ್ಲದೆ ಇರುವವರೂ ಯಡಿಯೂರಪ್ಪನವರಿಂದ ಮೇಲೆ ಬಂದಿದ್ದಾರೆ. ಎಲ್ಲವನ್ನು ಸರಿಪಡಿಸಲು ರಾಷ್ಟ್ರೀಯ ನಾಯಕರೆ ಬರಬೇಕಾ ಎಂದು ಕೇಳುವ ಮೂಲಕ ಮೌನ ವಹಿಸಿರುವ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.