Ad imageAd image

‘ಮನುಕುಲಕ್ಕೆ ವಚನ ತಲುಪಲು ಶ್ರಮಿಸಿದವರು ಫ.ಗು ಹಳಕಟ್ಟಿ’

Nagesh Talawar
‘ಮನುಕುಲಕ್ಕೆ ವಚನ ತಲುಪಲು ಶ್ರಮಿಸಿದವರು ಫ.ಗು ಹಳಕಟ್ಟಿ’
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರು, 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ಮನುಕುಲಕ್ಕೆ ತಲುಪಿಸಲು ಶ್ರಮಿಸಿದ ಮಹಾನ ದಾರ್ಶನಿಕರು ಡಾ. ಫ.ಗು ಹಳಕಟ್ಟಿಯವರು ಎಂದು ಹೇಳಿದರು.

ವಚನಗಳು ಭಾಷಾಂತರಗೊಂಡು ವಚನಗಳಲ್ಲಿನ ತತ್ವಾದರ್ಶಗಳು ಜಗತ್ತಿನಾದ್ಯಂತ ಪಸರಿಸಬೇಕು. ಅಮೂಲ್ಯ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿಕೊಟ್ಟು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾರ್ಥಕ ಸಾಧನೆ ಯುವಕರು ಅರಿಯಬೇಕು. ವಿದ್ಯಾರ್ಥಿ ಬದುಕಿನಲ್ಲಿ ಇಂತಹ ದಾರ್ಶನಿಕರ ತತ್ವಾದರ್ಶಗಳಿಂದ ಪ್ರೇರಣೆ ಪಡೆಯಬೇಕು  ಎಂದು ಅವರು ತಿಳಿಸಿದರು. ಮೋಹನ್ ಕಟ್ಟಿಮನಿ ಅವರು ಉಪನ್ಯಾಸ ನೀಡಿ, ಸಮಾಜದ ಹಿತಕ್ಕಾಗಿ ನಿಸ್ವಾರ್ಥದಿಂದ ಶರಣರ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ ಮನುಕುಲಕ್ಕೆ ತಲುಪಿಸಿದ ಕೀರ್ತಿ ಡಾ.ಪ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ್ ಮಾರಿಹಾಳ ಮಾತನಾಡಿ,  ಡಾ.ಫ.ಗು.ಹಳಕಟ್ಟಿಯವರು ಶರಣರ ವಚನಗಳ ಸಂಗ್ರಹಣೆ ಮುದ್ರಣಗಳಿಂದ ಈ ಸಮಾಜಕ್ಕೆ ನೀಡಿದ್ದಾರೆ.  ಅವರು ಸಂರಕ್ಷಿಸಿದ್ದ ವಚನ ಸಾಹಿತ್ಯಗಳ ಸಂದೇಶಗಳನ್ನು ಮುಂದಿನ  ಪೀಳಿಗೆಗಳಿಗೆ ತಲುಪಿಸಬೇಕು ಎಂದು ಅವರು ಹೇಳಿದರು. ಸಮಾಜ ಮುಖಂಡರಾದ ಬಿ.ಎನ್.ನೂಲವಿ ಅವರು ಮಾತನಾಡಿದರು. ಬಸವರಾಜ ನಾಟಿಕಾರ ವಚನ ಗಾಯನ ನಡೆಸಿಕೊಟ್ಟರು. ಸುಭಾಷ ಕನ್ನೂರು ಅವರು ನಿರೂಪಿಸಿ, ವಂದಿಸಿದರು.

ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಭೂಮಾಪನ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುಳಗುಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ,  ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article