ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. 5 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಮಂಗಳವಾರ ಬೆದರಿಕೆ ಕಾಲ್ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಫೋನ್ ಮಾಡಿದವನು ತಾನು ಲಾರೆನ್ಸ್ ಬಿಷ್ಟೋಯಿ ಸೋದರ ಎಂದು ಹೇಳಿಕೊಂಡಿದ್ದಾನಂತೆ.
ಸಲ್ಮಾನ್ ಖಾನ್ ಬಿಷ್ಣೋಯಿ ಸಮುದಾಯದ ದೇಗುಲಕ್ಕೆ ಬಂದು ಕ್ಷಮೆಯಾಚಿಸಬೇಕು. ಇಲ್ಲ 5 ಕೋಟಿ ರೂಪಾಯಿ ನೀಡಬೇಕು. ಇಲ್ಲದೆ ಹೋದರೆ ಅವನನ್ನು ಹತ್ಯೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನು ಸಕ್ರಿಯವಾಗಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾನಂತೆ. ನಟ ಸಲ್ಮಾನ್ ಖಾನ್ ಗೆ ಮೇಲಿಂದ ಮೇಲೆ ಬೆದರಿಕೆ ಕರೆಗಳು ಬರುತ್ತಿವೆ. ಇತ್ತೀಚೆಗೆ ಎನ್ ಸಿಪಿ ಮಾಜಿ ಸಚಿವ ಬಾಬಾ ಸಿದ್ಧೀಕಿ ಅವರನ್ನು ಈ ತಂಡ ಹತ್ಯೆಯಾಗಿದೆ. ಇದರಲ್ಲಿ ಲಾರೆನ್ಸ್ ಬಿಷ್ಣೋಯಿ ತಂಡದ ಕೈವಾಡವಿದೆ ಎನ್ನಲಾಗುತ್ತಿದೆ.