ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಕೊಡಲಿಯಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಮಂಗಳವಾರ ಕೊಲೆ ಮಾಡಿದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊನ್ನೂರಿನಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಕೊಲೆಯಾದ ನಿಂಗಪ್ಪ ಅರವಳಿ(41) ಎಂಬಾತ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನೀಲಮ್ಮ(38), ಈಕೆಯ ಪ್ರಿಯಕರ ಮಹೇಶ್, ಕೊಲೆಗಾರ ಯಲ್ಲಪ್ಪ ಬಂಧಿತ ಆರೋಪಿಗಳು.
ನಿನ್ನೆ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ನಿಂಗಪ್ಪ ಕಟ್ಟೆಯ ಮೇಲೆ ಮಲಗಿದ್ದ. ಆಗ ಬೈಕ್ ನಲ್ಲಿ ಬಂದ ಗುಜಮನಾಳ ಗ್ರಾಮದ ಯಲ್ಲಪ್ಪ ಅವನ ಮೇಲೆ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾನೆ. ಈ ಕೃತ್ಯ ಸಂಬಂಧ ಕೊಲೆಯಾದವನ ಪತ್ನಿ ನೀಲಮ್ಮ, ಪ್ರಿಯಕರ ಮಹೇಶ ಗೊಳನ್ನವರ್ ಹಾಗೂ ಯಲ್ಲಪ್ಪನನ್ನು ನೇಸರಗಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.