ಪ್ರಜಾಸ್ತ್ರ ಸುದ್ದಿ
ಉತ್ತರ ಕನ್ನಡ(Uttara Kannada): ವಿಜಯಪುರದಿಂದ ಮಂಗಳೂರು ಕಡೆ ಹೊರಟಿದ್ದ ಕೆಎಸ್ಆರ್ ಟಿಸ್ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಬೈಕ್ ನಲ್ಲಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಹೊನ್ನಾವರದಲ್ಲಿ ನಡೆದಿದೆ. ರಮೇಶ ನಾಯ್ಕ(22), ಸಂಶಿಯ ನಾಯ್ಕ(25) ಹಾಗೂ ರಾಘವೇಂದ್ರ ಸೋಮಯ್ಯಗೌಡ(34) ಮೃತರೆಂದು ಗುರುತಿಸಲಾಗಿದೆ.
ಮಂಕಿ ಕಡೆಯಿಂದ ಹೊನ್ನಾವರ ಕಡೆ ಬೈಕ್ ನಲ್ಲಿ ಹೊರಟಿದ್ದರು. ವಿಜಯಪುರದಿಂದ ಮಂಗಳೂರು ಕಡೆ ಸಾರಿಗೆ ಬಸ್ ಹೊರಟಿದ್ದರ ಮಧ್ಯೆ ಅಪಘಾತ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.