Ad imageAd image

30 ಅಡಿಯಿಂದ ಬಿದ್ದ ಕಾರು, ಮೂವರಿಗೆ ಗಂಭೀರ ಗಾಯ

Nagesh Talawar
30 ಅಡಿಯಿಂದ ಬಿದ್ದ ಕಾರು, ಮೂವರಿಗೆ ಗಂಭೀರ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೂಡಿಗೆರೆ(Mudigere): ಬೆಂಗಳೂರಿನಿಂದ ಹೊರನಾಡಿಗೆ ಹೊರಟಿದ್ದ ಕಾರೊಂದು ಬರೋಬ್ಬರಿ 30 ಅಡಿಯಿಂದ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಹತ್ತಿರ ಶನಿವಾರ ಮುಂಜಾನೆ ನಡೆದಿದೆ. ಅಪಘಾತದಲ್ಲಿ(Accident) ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆಯಂತೆ.

ಬೆಂಗಳೂರಿನಿಂದ ಬರುತ್ತಿದ್ದ ಕಾರು(Car) ಮಂಜಿನಿಂದಾಗಿ ಸುಂಕಸಾಲೆ ಹತ್ತಿರದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಸುಮಾರು 30 ಅಡಿ ಆಳಕ್ಕೆ ಬಿದ್ದಿದೆ. ಕೆಳಗೆ ಪಂಚಾಯ್ತಿ ಕಚೇರಿಯಿದ್ದು, ಕಚೇರಿ ಆವರಣದಲ್ಲಿ ಕಾರು ಬಂದು ಬಿದ್ದಿದೆ. ಮೂವರು ಸ್ಥಿತಿ ಗಂಭೀರವಾಗಿದೆ. ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article