ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಹೊಲಕ್ಕೆ ಹೋಗುವ ದಾರಿ ವಿಚಾರಕ್ಕೆ ಗಲಾಟೆ ನಡೆದು ಮೂವರಿಗೆ ಚಾಕು ಇರಿದ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಟ್ಟೆಮನುಗನ ಗ್ರಾಮದಲ್ಲಿ ನಡೆದಿದೆ. ಹೊಲದ ಮಾಲೀಕ ಬಸವರಾಜು, ಪ್ರದೀಪ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇವರ ಮೇಲೆ ರಾಡ್ ನಿಂದಲೂ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಜಮೀನಿಗೆ ಹೋಗುವ ದಾರಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಪ್ರಕರಣವಿದೆ. ಆದರೂ ಸೋಮೇಶ್, ಕುಮಾರ್, ರವಿ, ಬುದ್ದ, ಸಣ್ಣಕುಮಾರ್, ದೊಡ್ಡಸಿದ್ದು, ರಾಜಶೇಖರ್, ಕುಮಾರ್, ಕವಿತಾ, ಮುನಿಯಮ್ಮ ಎಂಬುವರು ಹೊಲಕ್ಕೆ ಬಂದು ಗಲಾಟೆ ಮಾಡಿದ್ದಾರಂತೆ. ಅದು ತಾರಕಕ್ಕೆ ಹೋಗಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.