ಪ್ರಜಾಸ್ತ್ರ ಸುದ್ದಿ
ಜಮ್ಮು ಮತ್ತು ಕಾಶ್ಮೀರ(Jammu and Kashmir): ಜಮ್ಮು ಮತ್ತು ಕಾಶ್ಮರದ ಪೂಂಚ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸೇನಾ ವಾಹನ ಅಪಘಾತವಾಗಿದೆ. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಮೂವರು ಕರ್ನಾಟಕದವರಾಗಿದ್ದಾರೆ. ಪೂಂಚ್ ಜಿಲ್ಲೆಯ ಮಂಧರ್ ಪ್ರದೇಶದ ಬಲ್ನೋಯಿ ಹತ್ತಿರ ದಾರಿ ತಪ್ಪಿ ಸುಮಾರು 100 ರಿಂದ 150 ಅಡಿ ಆಳದ ಕಂದಕ್ಕೆ ಉರುಳಿಬಿದ್ದಿದೆ. ಈ ವಾಹನದಲ್ಲಿ 10 ಸೈನಿಕರಿದ್ದರು. ಗಾಯಗೊಂಡವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ಐವರು ಯೋಧರಲ್ಲಿ ಬೆಳಗಾವಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ(45), ಕುಂದಾಪುರದ ಕೋಟೇಶ್ವರ ಬಿಜಾಡಿಯ ಅನೂಪ್(33) ಹಾಗೂ ಮಹಾಲಿಂಗಪುರದ ಮಹೇಶ್(25) ಮೃತ ಯೋಧರಾಗಿದ್ದಾರೆ. ಈ ವಿಚಾರ ತಿಳಿದು ಕುಟುಂಬಸ್ಥರಿಗೆ ಆಘಾತವಾಗಿದೆ. ಯೋಧರ ಸ್ವಗ್ರಾಮಗಳಲ್ಲಿ ದುಃಖದ ವಾತಾವರಣವಿದೆ. ಭಾರತೀಯ ಸೇನೆಯ ಪ್ರಕ್ರಿಯೆಗಳು ಮುಗಿದು ಇಂದು ಸಂಜೆ ಅಥವ ನಾಳೆ ಪಾರ್ಥಿವ ಶರೀರ ಗ್ರಾಮಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.