Ad imageAd image

ಭೀಕರ ಕಾರು ಅಪಘಾತ, ಮೂವರು ವಿದ್ಯಾರ್ಥಿಗಳು ಮೃತ್ಯು

ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಶನಿವಾರ ನಸುಕಿನ ಜಾವ ನಗರದ ಹೊರವಲಯದಲ್ಲಿ ನಡೆದಿದೆ.

Nagesh Talawar
ಭೀಕರ ಕಾರು ಅಪಘಾತ, ಮೂವರು ವಿದ್ಯಾರ್ಥಿಗಳು ಮೃತ್ಯು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೋಲಾರ(Kolara): ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕಾಲೇಜಿನ(College) ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಶನಿವಾರ ನಸುಕಿನ ಜಾವ ನಗರದ ಹೊರವಲಯದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಗಳು ರೇವಾ(Reva university) ವಿಶ್ವವಿದ್ಯಾಲಯದವರೆಂದು ತಿಳಿದು ಬಂದಿದೆ. ಅದೃಷ್ಟವಶಾತ್ ಓರ್ವ ವಿದ್ಯಾರ್ಥಿ ಬದುಕುಳಿದಿದ್ದಾನೆ.

ಆಡಿ(audi car) ಕಾರಿನಲ್ಲಿ ಬಾಂಗರಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಅಪಘಾತ(Accident) ನಡೆದಿದೆ. ಕಾರು ಎಷ್ಟೊಂದು ವೇಗದಲ್ಲಿರಬಹುದು ಅನ್ನೋ ಅಂದಾಜು ಸಿಗೋದಷ್ಟರ ಮಟ್ಟಿಗೆ ನಜ್ಜುಗುಜ್ಜಾಗಿದೆ. ಬಂಗಾರಪೇಟೆಯ ಪ್ರಜ್ವಲ್, ಬಳ್ಳಾರಿಯ ಬಸವರಾಜ್, ಹಾಸನದ ಹರ್ಷವರ್ಧನ್ ಮೃತ ವಿದ್ಯಾರ್ಥಿಗಳು. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article