ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangalore): ಇಲ್ಲಿನ ಹೊರವಲಯದಲ್ಲಿರುವ ರೆಸಾರ್ಟ್(Resort) ವೊಂದರಲ್ಲಿನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ದಾರುಣ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಉಚ್ಚಿಲ ಬೀಚ್ ಹತ್ತಿರ ಇರುವ ರೆಸಾರ್ಟ್ ನಲ್ಲಿ ದುರಂತ ನಡೆದಿದೆ. ಮೃತ ಯುವತಿಯುವರು ಮೈಸೂರು ಮೂಲದವರಾಗಿದ್ದಾರೆ.
ನಿಶಿತಾ ಎಂ.ಡಿ(21), ಕೀರ್ತನಾ.ಎನ್(21) ಹಾಗೂ ಪಾರ್ವತಿ.ಎಸ್(20) ಮೃತ ಯುವತಿಯರೆಂದು ತಿಳಿದು ಬಂದಿದೆ. ವೀಕೆಂಡ್ ಹಿನ್ನಲೆಯಲ್ಲಿ ಮಂಗಳೂರಿಗೆ ಬಂದಿದ್ದಾರೆ. ಮುಂಜಾನೆ ರೆಸಾರ್ಟ್ ಗೆ ಬಂದು ರೂಂ ಬುಕ್ ಮಾಡಿದ್ದಾರೆ. ನಂತರ ಸ್ವಿಮ್ಮಿಂಗ್ ಪೂಲ್(Swimming Pool) ನಲ್ಲಿ ಇಳಿದು ಎಂಜಾಯ್ ಮಾಡುತ್ತಿದ್ದಾರೆ. ಈಜುಕೊಳದ ಒಂದು ಕಡೆ 6 ಅಡಿಗೂ ಹೆಚ್ಚು ಆಳವಿದೆ. ಆ ಕಡೆ ಯುವತಿಯೊಬ್ಬಳು ಹೋಗಿದ್ದು, ಆಕೆಯ ರಕ್ಷಣೆಗೆ ಹೋದವರು ಸಹ ಮುಳುಗಿ ಮೃತಪಟ್ಟಿರಬಹುದು ಅನ್ನೋ ಅನುಮಾನ ಮೂಡಿದೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.