ಪ್ರಜಾಸ್ತ್ರ ಸುದ್ದಿ
ಸೌಥ್ ಆಫ್ರಿಕಾ ನೆಲದಲ್ಲಿ ಭಾರತ ತಂಡ ಟಿ-20 ಪಂದ್ಯದಲ್ಲಿ 200 ಪ್ಲಸ್ ರನ್ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದೆ. 2024ರಲ್ಲಿ ಬರೋಬ್ಬರಿ 8 ಬಾರಿ 200 ಪ್ಲಸ್ ರನ್ ಗಳಿಸಿದೆ. ಯುವ ಆಟಗಾರ ತಿಲಕ್ ವರ್ಮಾ ಭರ್ಜರಿ ಶತಕ ಹಾಗೂ ಅಭಿಷೇಕ್ ಶರ್ಮಾ ಅರ್ಧ ಶತಕ ತಂಡವನ್ನು 200ರ ಗಡಿ ದಾಟುವಂತೆ ಮಾಡಿತು. ಟಾಸ್ ಗೆದ್ದ ಸೌಥ್ ಆಫ್ರಿಕಾ ನಾಯಕ ಮಾರ್ಕಂ, ಟೀಂ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಬೇಕು ಎನ್ನುವ ಲೆಕ್ಕಾಚಾರ ಫಲಿಸಲಿಲ್ಲ. ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟ್ ಆದರು.
ತಿಲಕ್ ವರ್ಮಾ 107(7 ಸಿಕ್ಸ್, 8 ಫೋರ್), ಅಭಿಷೇಕ್ ವರ್ಮಾ 50 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ನಾಯಕ ಸೂರ್ಯಕುಮಾರ ಯಾದವ್ 1, ಹಾರ್ದಿಕ್ ಪಾಂಡ್ಯ 18, ರಿಂಕು ಸಿಂಗ್ 8, ರಮಣದೀಪ್ ಸಿಂಗ್ 15, ಅಕ್ಷರ್ ಪಟೇಲ್ 1 ರನ್ ಗಳಿಸಿದರು. ಅಂತಿಮವಾಗಿ 20 ಓವರ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಆಫ್ರಿಕಾ ಪರ ಸಿಮೆಲನ್, ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು. ಮಾರ್ಕ್ ಜಾನ್ಸನ್ 1 ವಿಕೆಟ್ ಪಡೆದ.
ಬಿಗ್ ಸ್ಕೋರ್ ಚೇಸ್ ಮಾಡಿದ ಆಫ್ರಿಕಾ ತಂಡ ಸಹ 200ರ ಗಡಿ ದಾಟುವ ಮೂಲಕ ಗೆಲ್ಲಲು ಕೊನೆಯ ತನಕ ಹೋರಾಟ ನಡೆಸಿತು. ಹೆನ್ರಿಚ್ 41, ಮಾರ್ಕೊ ಜಾನ್ಸನ್ 54, ನಾಯಕ ಮಾರ್ಕಂ 29 ರನ್ ಬಿಟ್ಟರೆ ಉಳಿದವರಿಂದ ರನ್ ಹೊಳೆ ಹರಿಯದಂತೆ ಟೀಂ ಇಂಡಿಯಾ ಬೌಲರ್ ಗಳು ಕಟ್ಟಿ ಹಾಕಿದರು. ಇದರಿಂದಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. 11 ರನ್ ಗಳಿಂದ ಭಾರತ ಗೆಲುವು ಸಾಧಿಸಿ, 4 ಪಂದ್ಯಗಳಲ್ಲಿ 2-1ರಿಂದ ಲೀಡ್ ಸಾಧಿಸಿದೆ. ಭಾರತ ಪರ ಅರ್ಷದೀಪ್ ಸಿಂಗ್ 3, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು ಸಂಭ್ರಮಿಸಿದರು. ಪಾಂಡ್ಯ, ಅಕ್ಷರ ಪಟೇಲ್ ತಲಾ 1 ವಿಕೆಟ್ ಪಡೆದರು. ತಿಲಕ್ ವರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.