ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗರ್ಭಿಣಿ(pregnant) ಮೃತಪಟ್ಟಿದ್ದು, ಪತಿ ಗಾಯಗೊಂಡ ಘಟನೆ ನೆಲಮಂಗಲದ ಹತ್ತಿರ ನಡೆದಿದೆ. ಅಲ್ಲದೇ ಹೊಟ್ಟೆಯಲ್ಲಿದ್ದ 8 ತಿಂಗಳ ಕೂಸು ಸಹ ಮೃತಪಟ್ಟಿದೆ. ಅಪಘಾತದ ತೀವ್ರತೆಗೆ ಮಗು ಆಚೆ ಬಂದು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಎಡೇಹಳ್ಳಿ ಗ್ರಾಮದ ಸಿಂಚನಾ(30) ಮೃತ ದುರ್ದೈವಿ. ಪತಿ ಮಂಜುನಾಥ್ ಗಾಯಗೊಂಡಿದ್ದಾರೆ.
ದಾಬಸ್ ಪೇಟೆಯಲ್ಲಿರುವ ಶಿವಗಂಗೆ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ವಾಪಸ್ ಸ್ವಗ್ರಾಮವಾದ ತೋಟನಹಳ್ಳಿಗೆ ಹೊರಟ್ಟಿದ್ದರು. ಈ ವೇಳೆ ಅಪಘಾತ(Accident) ನಡೆದಿದೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.