ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ಟಿಪ್ಪರ್ ವೊಂದು ಎತ್ತಿನ ಗಾಡಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ನಾಲ್ಕು ಎತ್ತುಗಳು ಮೃತಪಟ್ಟ ದಾರುಣ ಘಟನೆ ಮೊಳಕಾಲ್ಮೂರು ತಾಲೂಕಿನ ಭೈರಾಪುರ ಗ್ರಾಮದ ಹತ್ತಿರ ನಡೆದಿದೆ. ಗುರುವಾರ ಮುಂಜಾನೆ ಮೂರು ಎತ್ತಿನ ಗಾಡಿಗಳಿಗೆ ಟಿಪ್ಪರ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ವೇಳೆ ಟಿಪ್ಪರ್ ಚಾಲಕ ಹಾಗೂ ನಾಲ್ಕು ಎತ್ತುಗಳು ಮೃತಪಟ್ಟಿವೆ. ಅದೃಷ್ಟವಶಾತ್ ಗಾಡಿಗಳಲ್ಲಿದ್ದ ರೈತರು ಪಾರಾಗಿದ್ದಾರೆ.
ಚಳ್ಳಕೆರೆಯಿಂದ ಬಳ್ಳಾರಿ ಕಡೆ ಹೊರಟಿದ್ದ ಲಾರಿ, ಮುಂಜಾನೆ ಹೊಲಗಳಿಗೆ ಹೊರಟಿದ್ದ ಎತ್ತಿನಗಾಡಿಗಳೊಂದಿಗೆ ರೈತರು ಹೊರಟಿದ್ದರು. ಭೈರಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಅಪಘಾತ ನಡೆದಿದೆ. ಇನ್ನು ಎರಡು ಎತ್ತುಗಳಿಗೆ ಗಂಭೀರ ಗಾಯಗಳಾಗಿವೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.