ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಹನಿಟ್ರ್ಯಾಪ್ ಸಾಕಷ್ಟು ಸದ್ದು ಮಾಡುತ್ತಿದೆ. ಸಚಿವ ಕೆ.ಎನ್ ರಾಜಣ್ಣ ಮಾಡಿರುವ ಈ ಗಂಭೀರ ಆರೋಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೆಲವರು ಹನಿಟ್ರ್ಯಾಪ್ ನಡೆದೇ ಇಲ್ಲ. ಇದೊಂದು ರಾಜಕೀಯ ದಾಳ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಖೆಡ್ಡಾಕ್ಕೆ ಬಿದ್ದಿರಬಹುದು ಅದಕ್ಕೆ ಇಷ್ಟೊಂದು ಭಯ ಅಂತಿದ್ದಾರೆ. ಇದೆಲ್ಲದರ ನಡುವೆ ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಹೆಚ್.ಸಿ ಮಹಾದೇವಪ್ಪ ಅಂಬೇಡ್ಕರ್ ಅವರ ಮಾತನ್ನು ಪೋಸ್ಟ್ ಮಾಡಿದ್ದು ಇದು ಯಾರಿಗೆ ಎನ್ನುವ ಕುತೂಹಲ ಮೂಡಿದೆ. ಅವರ ಪೋಸ್ಟ್ ಇಲ್ಲಿದೆ ನೋಡಿ.
ಯಾರಾದರೂ ನಿಮ್ಮನ್ನು ಅವರ ಅರಮನೆಗೆ ಆಹ್ವಾನಿಸಿದಾಗ ನಿಮಗೆ ಇಷ್ಟವಾದರೆ ಹೋಗಿ.
ಆದರೆ ಅದಕ್ಕಾಗಿ ನಿಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಹೋಗಬೇಡಿ. ಒಂದು ವೇಳೆ ಆ ದೊರೆಯು ನಿಮ್ಮ ಜೊತೆಗೆ ಜಗಳಮಾಡಿ ನಿಮ್ಮನ್ನು ಅವನ ಅರಮನೆಯಿಂದ ಹೊರ ಹಾಕಿದರೆ ಆಗ ನೀವು ಎಲ್ಲಿಗೆ ಹೋಗುತ್ತೀರಿ? ನೀವು ನಿಮ್ಮನ್ನೇ ಮಾರಾಟ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಿ ಆದರೆ… pic.twitter.com/peB5r97HmH
— Dr H C Mahadevappa(Buddha Basava Ambedkar Parivar) (@CMahadevappa) March 26, 2025