ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಶಾಸಕ ಬಸನಗೌಡ ಪಾಟೀಲ ಯತ್ನಾಳ್ 6 ವರ್ಷಗಳ ಉಚ್ಛಾಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಮೇಶ ಜಾರಕಿಹೊಳಿ ಮಾಧ್ಯಮಗೋಷ್ಠಿ ನಡೆಸಿದರು. ನಾಳೆ ಭಿನ್ನಮತೀಯರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಯತ್ನಾಳ್ ಉಚ್ಛಾಟನೆಯನ್ನು ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್ ಗೆ ಪತ್ರ ಬರೆಯುತ್ತೇವೆ. ಇದು ನಿರೀಕ್ಷಿತ. ನಮ್ಮ ಬಣಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದರು.
ಯತ್ನಾಳ್ ಅವರು ದೊಡ್ಡ ಸಮುದಾಯದ ನಾಯಕರು. ಅವರ ಸಾಮರ್ಥ್ಯ ಬಳಸಿಕೊಳ್ಳಬೇಕು. ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ. ಯತ್ನಾಳ ನಮ್ಮ ಪಕ್ಷದ ದೊಡ್ಡ ನಾಯಕ. ಹಾಗಂತ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ಏನೇ ಆಗಲಿ, ನಾನಾಗಲಿ, ಯತ್ನಾಳ್ ಅವರಾಗಲಿ ಎಲ್ಲರೂ ಬಿಜೆಪಿಯಲ್ಲಿ ಇರುತ್ತೇವೆ. ಉಚ್ಛಾಟನೆ ಬಗ್ಗೆ ಪುನರ್ ಪರಿಶೀಲನೆ ಬಗ್ಗೆ ಹೈಕಮಾಂಡ್ ಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.