ಪ್ರಜಾಸ್ತ್ರ ಸುದ್ದಿ
ನಟ ರಾಕಿಂಗ್ ಸ್ಟಾರ್ ಯಶ್ ಇದೀಗ 39ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಟಾಕ್ಸಿಕ್ ಚಿತ್ರದ ಪೀಕ್ ರಿಲೀಸ್ ಮಾಡಲಾಗಿದೆ. ಕೆಜಿಎಫ್ ಬಳಿಕ ಮತ್ತೆ ಗ್ಯಾಂಗ್ ಸ್ಟರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 49 ಸೆಕೆಂಡ್ ಗಳ ಪೀಕ್ ನಲ್ಲಿ ಯಶ್ ರೋಲ್ ನ ಸಣ್ಣ ಝಲಕ್ ಬಿಡಲಾಗಿದೆ. ಗೀತು ಮೋಹನದಾಸ್ ಟಾಕ್ಸಿಕ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಜೊತೆಗೆ ಸ್ವತಃ ಯಶ್ ಮೊನಸ್ಟಾರ್ ಮೈಂಡ್ ಕ್ರಿಯೇಷನ್ ಮೂಲಕ ತಾವು ಇದರಲ್ಲಿ ಬಂಡವಾಳ ಹೂಡಿದ್ದಾರೆ.
ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್ ಡೇಟ್ ಇಲ್ಲ ಎಂದು ಫ್ಯಾನ್ಸ್ ಕೇಳುತ್ತಿದ್ದರು. ಹುಟ್ಟು ಹಬ್ಬದ ಪ್ರಯುಕ್ತ ಸಣ್ಣದೊಂದು ಬಿಟ್ ಬಿಡುವ ಮೂಲಕ ಸಿನಿಮಾ ಯಾವ ಮಟ್ಟದಲ್ಲಿ ಇರಲಿದೆ ಎನ್ನುವ ಸುಳಿವು ನೀಡಿದ್ದಾರೆ. ಕೆಜಿಎಫ್-2 ಚಿತ್ರ ಬಿಡುಗಡೆಯಾಗಿಯೇ 3 ವರ್ಷವಾಗಿದೆ. ಇದುವರೆಗೂ ಯಶ್ ನಟನೆಯ ಯಾವುದೇ ಸಿನಿಮಾ ಬಂದಿಲ್ಲ. ಒಂದು ಚಿತ್ರದಿಂದ ಮತ್ತೊಂದು ಚಿತ್ರ ಇಷ್ಟೊಂದು ದೊಡ್ಡ ಗ್ಯಾಪ್ ಇರುವುದಕ್ಕೆ ಅವರು ತಮ್ಮದೆ ಕಾರಣಗಳನ್ನು ನೀಡಿದ್ದು, ಅಭಿಮಾನಿಗಳು ಕಾಯಬೇಕಷ್ಟೆ.