ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪೋನ್ ಪೇ, ಗೂಗಲ್ ಪೇ, ಭಾರತ್ ಪೇ ಸೇರಿದಂತೆ ಇತರೆ ಆಪ್ ಗಳ ಮೂಲಕ ವ್ಯವಹಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳು, ಬೇಕರಿ, ಹೋಟೆಲ್, ಕಾಂಡಿಮೆಂಟ್ಸ್, ಬೀಡಿ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಕಟ್ಟಿ ಎಂದು ಲಕ್ಷ ಲಕ್ಷ ರೂಪಾಯಿ ತೆರಿಗೆಯ ನೋಟಿಸ್ ನೀಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಈ ರೀತಿ ತೆರಿಗೆ ಇಲಾಖೆಯಿಂದ 40 ಲಕ್ಷ ರೂಪಾಯಿ, 50 ಲಕ್ಷ ರೂಪಾಯಿ ತೆರಿಗೆ ಕಟ್ಟಿ ಎನ್ನುವ ನೋಟಿಸ್ ಬಂದಿದೆ.
ತೆರಿಗೆ ಇಲಾಖೆಯ ನೋಟಿಸ್ ನಿಂದ ಸಣ್ಣಪುಟ್ಟ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಇದರಿಂದ ಅವರಿಗೆ ಶಾಕ್ ಆಗಿದೆ. ಹೀಗಾಗಿ ಈಗ ಯುಪಿಐ ಪಾವತಿಯಿಂದ ವ್ಯಾಪಾರಿಗಳು ದೂರ ಸರಿಯುತ್ತಿದ್ದು, ನಗದು ವ್ಯಾಪಾರ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಪೋನ್ ಪೇ, ಗೂಗಲ್ ಪೇ, ಭಾರತ್ ಪೇ ಸೇರಿದಂತೆ ಯಾವುದೇ ಆನ್ಲೈನ್ ಪೇಪೆಂಟ್ ಇಲ್ಲವೆಂದು ಹೇಳುತ್ತಿದ್ದಾರೆ. ತಮ್ಮ ಅಂಗಡಿಗಳಲ್ಲಿ ಕ್ಯೂಆರ್ ಕೋಟ್ ಸ್ಟಿಕ್ಕರ್ ಕಿತ್ತಿ, ಓನ್ಲಿ ಕ್ಯಾಶ್ ಎನ್ನುವ ಬೋರ್ಡ್ ಹಾಕುತ್ತಿದ್ದಾರೆ.