ಪ್ರಜಾಸ್ತ್ರ ಸುದ್ದಿ
ಬೆಂಗಳೂರು:(Bengaloru) ನಗರದ ಹೊರವಲಯದ ಚಂದಾಪುರ ಎಸ್ ಬಿಐ ಶಾಖೆಯ ಮ್ಯಾನೇಜರ್ ಗ್ರಾಹಕರೊಬ್ಬರೊಂದಿಗೆ ಕನ್ನಡದಲ್ಲಿ ಮಾತನಾಡುವ ವಿಚಾರಕ್ಕೆ ದರ್ಪ ತೋರಿಸಿದ್ದಾರೆ. ನಾನು ಕನ್ನಡ ಮಾತನಾಡಲ್ಲ. ಇದು ಭಾರತ. ನನ್ನ ಕನ್ನಡವನ್ನು ಮಾತನಾಡುವುದೇ ಇಲ್ಲ ಎಂದು ಅಹಂಕಾರ ತೋರಿಸಿದ್ದು, ಇದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗುತ್ತಿದ್ದಂತೆ ಮಹಿಳಾ ಮ್ಯಾನೇಜರ್ ವರ್ಗಾವಣೆ ಮಾಡಲಾಗಿದೆ.
ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ ಮ್ಯಾನೇಜರ್ ಅನ್ನು ಹೊರ ರಾಜ್ಯಕ್ಕೆ ವರ್ಗಾಯಿಸಬೇಕು. ಸ್ಥಳೀಯ ಭಾಷೆಗೆ ಗೌರವ ಕೊಡದೆ ಇರುವ, ಇಲ್ಲಿಗೆ ಉದ್ಯೋಗಕ್ಕೆ ಬಂದ ಮೇಲೆ ಇಲ್ಲಿನ ಭಾಷೆ ಕಲಿಯದೆ ಇರುವ ಇಂತವರನ್ನು ಇಲ್ಲಿಂದ ಓಡಿಸಬೇಕು ಎಂದು ಕಿಡಿ ಕಾರಿದ್ದಾರೆ. ಇನ್ನು ಕ್ಷಮೆ ಕೇಳುವ ವಿಡಿಯೋವೊಂದನ್ನು ಈಕೆ ಮಾಡಿದ್ದು, ಅಲ್ಲಿಯೂ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾಳೆ. ಸರಿಯಾಗಿ ಕ್ಷಮೆ ಕೇಳಲು ಆಗದೆ ನಗುತ್ತಾ ಏನೇನೋ ಮಾತನಾಡಿದ್ದು ಇಂತವರನ್ನು ಕೂಡಲೇ ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದಾರೆ.