Ad imageAd image

ಇಂದಿರಾರತ್ನ ಪ್ರಶಸ್ತಿಗೆ ಅನುವಾದಕಿ ಡಾ.ಮಲರ್ ವಿಳಿ.ಕೆ ಆಯ್ಕೆ

ಕರ್ನಾಟಕ ಲೇಖಕಿಯರ ಸಂಘ ನೀಡುವ 2024ನೇ ಸಾಲಿನ ‘ಇಂದಿರಾರತ್ನ’ ಪ್ರಶಸ್ತಿಗೆ ಹಿರಿಯ ಅನುವಾದಕಿ, ಪ್ರೊ.ಡಾ.ಮಲರ್ ವಿಳಿ.ಕೆ ಅವರು ಆಯ್ಕೆ ಆಗಿದ್ದಾರೆ.

Nagesh Talawar
ಇಂದಿರಾರತ್ನ ಪ್ರಶಸ್ತಿಗೆ ಅನುವಾದಕಿ ಡಾ.ಮಲರ್ ವಿಳಿ.ಕೆ ಆಯ್ಕೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕರ್ನಾಟಕ ಲೇಖಕಿಯರ ಸಂಘ ನೀಡುವ 2024ನೇ ಸಾಲಿನ ‘ಇಂದಿರಾರತ್ನ’ ಪ್ರಶಸ್ತಿಗೆ ಹಿರಿಯ ಅನುವಾದಕಿ, ಪ್ರೊ.ಡಾ.ಮಲರ್ ವಿಳಿ.ಕೆ ಅವರು ಆಯ್ಕೆ ಆಗಿದ್ದಾರೆ. ನವೆಂಬರ್ 27ರಂದು ಸುರಾನ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್ ಪುಷ್ಪ ತಿಳಿಸಿದ್ದಾರೆ.

ಡಾ.ಮಲರ್ ವಿಳಿ.ಕೆ ಅವರು ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಕವಿ ಸಿದ್ಧಲಿಂಗಯ್ಯನವರ ಕವಿತೆಗಳನ್ನು ಮೊದಲ ಬಾರಿಗೆ ತಮಿಳಿಗೆ ಅನುವಾದಿಸಿದವರು ಡಾ.ಮಲರ್ ವಿಳಿ.ಕೆ ಅವರು. ಸಂಗಂ ಸಾಹಿತ್ಯ ಸೇರಿ ತಮಿಳಿನ ವಿವಿಧ ಸಂಸ್ಕೃತಿಕ ಜಗತ್ತನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಇಲ್ಲಿನ ಜನಕ್ಕೂ ಪರಿಚಯಿಸುತ್ತಾ ಸಾಹಿತ್ಯ ಪ್ರಚುರಪಡಿಸುತ್ತಿದ್ದಾರೆ. ತಮಿಳಿನ ಖ್ಯಾತ ಲೇಖಕರು, ಚಿತ್ರಸಾಹಿತಿಗಳಾದ ವೈರಮುತ್ತುರವರ ಪ್ರಸಿದ್ಧ ಕೃತಿ ‘ಕಳ್ಳಿಕ್ಕಾಟ್ಟು ಇತಿಗಾಸಂ’ ಅನ್ನು ಕನ್ನಡಕ್ಕೆ ‘ಕಳ್ಳಿಗಾಡಿನ ಇತಿಹಾಸ’ ಹೆಸರಿನ ಮೂಲಕ ಅನುವಾದಿಸಿದ್ದಾರೆ. ಇದಕ್ಕೆ ಕುವೆಂಪು ಭಾಷಾ ಭಾರತಿ ಪಶಸ್ತಿ ಸಂದಿದೆ. ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.

WhatsApp Group Join Now
Telegram Group Join Now
Share This Article