ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಾರಿಗೆ ನೌಕರರ ವೇತನ ಪರಿಷ್ಕರಣೆ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 5ರಂದು ನಾಲ್ಕು ಸಾರಿಗೆ ಘಟಕಗಳ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಕೆಎಸ್ಆರ್ ಟಿಸಿ, ಎನ್ ಡಬ್ಲುಆರ್ ಟಿಸಿ, ಕೆಕೆಆರ್ ಟಿಸಿ, ಬಿಎಂಟಿಸಿ ಘಟಕಗಳಿಂದ ಒಂದೇ ಒಂದು ಬಸ್ ರೋಡಿಗೆ ಇಳಿಯವುದಿಲ್ಲವೆಂದು ಹೇಳಲಾಗುತ್ತಿದೆ. ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸದಸ್ಯ ಆರ್.ಎಫ್ ಕವಳಿಕಾಯಿ ಹೇಳಿದ್ದಾರೆ.
ಮುಷ್ಕರಕ್ಕೆ ನಾಲ್ಕೂ ಸಾರಿಗೆ ಘಟಕಗಳ ಸಂಘಟನೆಗಳು ನಮಗೆ ಬೆಂಬಲ ನೀಡಿವೆ. ಬೇಡಿಕೆ ಈಡೇರುವ ತನಕ ಮುಷ್ಕರವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅಂದು ಒಂದೇ ಒಂದು ಬಸ್ ರಸ್ತೆಗೆ ಇಳಿಯುವುದಿಲ್ಲ. ಎಸ್ಮಾ ಜಾರಿಯಾದರೂ ನಾವು ಅದನ್ನು ಎದರಿಸುತ್ತೇವೆ ಎಂದಿದ್ದಾರೆ. 2020ರಿಂದ ಶೇಕಡ 15ರಷ್ಟು ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. 2024ರಿಂದ ಶೇಕಡ 25ರಷ್ಟು ವೇತನಕ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದಾರೆ.