ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ(atal bihari vajpayee) ವಾಜಪೇಯಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದರು. ‘ಸದೈವ್(Sadaiv Atal) ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಲಾಯಿತು. ಎನ್ ಡಿಎ ಮೈತ್ರಿಕೂಟದ ನಾಯಕರು ಸಹ ಈ ವೇಳೆ ಭೇಟಿ ನೀಡಿದರು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ(Modi) ಮೋದಿ, ದೇಶ ನಿರ್ಮಾಣಕ್ಕಾಗಿ ನೀಡಿದ ಅನ್ಯನ ಕೊಡೆಗೆಯಿಂದಾಗಿ ವಾಜಪೇಯಿ ಅವರನ್ನು ಇಂದು ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ. ಅವರ ಆಶಯಗಳ ಈಡೇರಿಕೆಗೆ ಶ್ರಮಿಸೋಣ ಎಂದಿದ್ದಾರೆ. ಆಗಸ್ಟ್ 16, 2018ರಲ್ಲಿ ವಾಜಪೇಯಿಯವರು ನಿಧನರಾಗಿದ್ದಾರೆ.