ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ಕಾರ್ಗಿಲ್ ವಿಜಯೋತ್ಸವಕ್ಕೆ ಇದೀಗ 25 ವರ್ಷಗಳ ಸಂಭ್ರಮ. ಇದರೊಂದಿಗೆ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಗುತ್ತಿದೆ. ಹೀಗಾಗಿ ರಾಷ್ಟ್ರಪತಿ ದ್ರೌಪದಿ(President) ಮುರ್ಮು, ಪ್ರಧಾನಿ ಮೋದಿ(Modi), ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿಪಕ್ಷ ನಾಯಕರೆಲ್ಲ ನಮನ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಹಾಗೂ ರಕ್ಷಣಾ ಸಚಿವರು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 1999ರಲ್ಲಿ ಕಾರ್ಗಿಲ್(Kargil Vijay Diwas) ವಿಜಯೋತ್ಸವ ಕಾರಣರಾಗಿ, ಪ್ರಾಣ ಅರ್ಪಿಸಿದ ಯೋಧರನ್ನು ಸ್ಮರಿಸಿಕೊಂಡಿದ್ದಾರೆ. ಇನ್ನು ಪ್ರಧಾನಿ ಮೋದಿ ಡ್ರಾಸ್ ನಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಭೇಟಿ ಕೊಟ್ಟು ಗೌರವ ನಮನ ಸಲ್ಲಿಸಿದರು. ದೇಶಕ್ಕಾಗಿ ಮಡಿದ ಯೋಧರಿಗೆ, ಸಶಸ್ತ್ರ ಪಡೆಯ ಅಧಿಕಾರಿಗಳಿಗೆ ಗೌರವ ಸಲ್ಲಿಸಿದರು. ಲಡಾಖ್ ನ ಕಾರ್ಗಿಲ್ ನಲ್ಲಿ 1999ರಲ್ಲಿ ಮೂರು ತಿಂಗಳ ಕಾಲ ಪಾಕ್ ನೊಂದಿಗೆ ಯುದ್ಧ ನಡೆಯಿತು. ಜುಲೈ 26ರಂದು ಅಂತಿಮವಾಗಿ ಕೊನೆಗೊಂಡಿತು. ಪಾಕ್ ವಿರುದ್ಧದ ಈ ವಿಜಯದ ನೆನಪಿಗಾಗಿ ಕಾರ್ಗಿಲ್ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.