ಪ್ರಜಾಸ್ತ್ರ ಸುದ್ದಿ
ಪುರುಲಿಯಾ(Purulia): ಟ್ರಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಬರೋಬ್ಬರಿ 9 ಜನರು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ನಮ್ಮೋಲ್ ಗ್ರಾಮದ ಹತ್ತಿರದ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಬಲರಾಂಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಮೃತರ ಗುರುತು ಪತ್ತೆ ಕಾರ್ಯ ನಡೆದಿದೆ.
ಮೃತರು ಜಾರ್ಖಂಡ್ ಮೂಲದವರಾಗಿದ್ದಾರೆ. ಪುರುಲಿಯಾದಲ್ಲಿ ನಡೆಯುತ್ತಿದ್ದ ಮದುವೆಗೆ ಆಗಮಿಸುತ್ತಿದ್ದರು. ಈ ವೇಳೆ ನಮ್ಮೋಲ್ ಗ್ರಾಮದ ಬಳಿಯ ಪುರುಲಿಯಾ-ಜೇಮಶೇಡ್ ಪುರ ರಾಷ್ಟ್ರೀಯ ಹೆದ್ದಾರಿ 18 ಭೀಕರ ಅಪಘಾತ ನಡೆದಿದೆ. ಇದರಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪ್ರಯಾಣಿಕರು ಒಳಗೆ ಸಿಲುಕಿದ್ದರು ಎಂದು ಪತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಟ್ರಕ್ ವಶಕ್ಕೆ ಪಡೆದಿದ್ದಾರೆ.