Ad imageAd image

ಭಾರತ, ಚೀನಾ ಟಾರ್ಗೆಟ್ ಮಾಡಿದ ಟ್ರಂಪ್

Nagesh Talawar
ಭಾರತ, ಚೀನಾ ಟಾರ್ಗೆಟ್ ಮಾಡಿದ ಟ್ರಂಪ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಟ್ ಟ್ರಂಪ್ ಹೊಸ ಹೊಸ ನೀತಿ ನಿಯಮಗಳ ಮೇಲೆ ಅನಿವಾಸಿ ಭಾರತೀಯರು ಅಥವ ಇತರೆ ದೇಶದವರು ಇರಬಹುದು ಎಲ್ಲರಿಗೂ ಎಚ್ಚರಿಕೆ ಸಂದೇಶ ಸಾರುತ್ತಿದ್ದಾರೆ. ನಮಗೆ ಹಾನಿ ಮಾಡುವ ದೇಶಗಳಿಗೆ ಸುಂಕ ಹಾಕುತ್ತೇವೆ ಎಂದು ಹೇಳಿದ್ದಾರೆ. ಫ್ಲೋರಿಡಾದ ರಿಟ್ರೀಟ್ ನಲ್ಲಿ ರಿಪಬ್ಲಿಕ್ ನರೊಂದಿಗೆ ಮಾತನಾಡುವ ವೇಳೆ, ದೇಶಕ್ಕೆ ಹಾನಿಕಾರಕವಾಗಿರುವ ದೇಶ ಹಾಗೂ ಜನರಿಗೆ ಸುಂಕ ವಿಧಿಸಲಾಗುವುದು ಎಂದಿದ್ದಾರೆ.

ಚೀನಾ ಸುಂಕ ಹೆಚ್ಚಳದ ಮೊದಲ ದೇಶವಾಗಿದೆ. ನಂತರ ಭಾರತ, ಬ್ರೆಜಿಲ್ ಸೇರಿ ಇತರೆ ರಾಷ್ಟ್ರಗಳಿವೆ. ಅಂತಹ ದೇಶಗಳ ಮೇಲೆ ಟ್ಯಾಕ್ಸ್ ವಿಧಿಸಲಾಗುವುದು. ಈ ಮೂಲಕ ನಮ್ಮ ಬೊಕ್ಕಸಕ್ಕೆ ಆದಾಯ ಹರಿದು ಬರಲಿದೆ. ಅಮೆರಿಕ ಹಿಂದಿಗಿಂತಲೂ ಶ್ರೀಮಂತರ ಹಾಗೂ ಶಕ್ತಿಯುತ ರಾಷ್ಟ್ರವಾಗಲು ಇದು ಸರಿಯಾದ ಸಮಯವಾಗಿದೆ ಅಂತಾ ಹೇಳಿದ್ದಾರೆ. ಇತ್ತೀಚೆಗೆ ಜನ್ಮತಃ ಸಿಗುವ ಪೌರತ್ವವನ್ನು ತೆಗೆದು ಹಾಕಲಾಗುವುದು ಎಂದಿದ್ದಾರೆ. ಇದು ಅಲ್ಲಿ ನೆಲೆಸಿರುವ ವಿದೇಶಿಗರು ಕಾನೂನು ಮೊರೆ ಹೋಗುವ ಹಂತಕ್ಕೆ ಬಂದಿದೆ.

WhatsApp Group Join Now
Telegram Group Join Now
Share This Article