ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅವರದೆ ಒಡೆತನದ ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಪೋಸ್ಟ್ ಮಾಡಿದ್ದು, ಆಗಸ್ಟ್ 1ರಿಂದ ಇದು ಜಾರಿಗೆ ಬರಲಿದೆ ಎಂದಿದ್ದಾರೆ.
ಭಾರತ ನಮ್ಮ ಸ್ನೇಹಿತನಾಗಿದ್ದರೂ ವ್ಯವಹಾರ ಮಾಡಿರುವುದು ಕಡಿಮೆ. ಅಮೆರಿಕದ ಸರಕುಗಳ ಮೇಲೆ ಭಾರತದ ಸುಂಕ ಹೆಚ್ಚಾಗಿದೆ. ಉಳಿದೆಲ್ಲ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಸುಂಕ ಹೆಚ್ಚಾಗಿರುವುದೆ ಇದಕ್ಕೆ ಕಾರಣ. ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಭಾರತ ಖರೀದಿಸಿದ್ದಕ್ಕಾಗಿ ದಂಡ ಎದುರಿಸಬೇಕಾಗುತ್ತೆ ಎನ್ನುವ ಮೂಲಕ ಎಚ್ಚರಿಕೆ ನೀಡುವ ಮಾತುಗಳನ್ನಾಡಿದ್ದಾರೆ.