ಪ್ರಜಾಸ್ತ್ರ ಸುದ್ದಿ
ವಾಷಿಂಗ್ಟನ್(Washington dc): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸುವ ಮೂಲಕ 2ನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಇದರೊಂದಿಗೆ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ(Kamala Harris) ಹ್ಯಾರಿಸ್ ಗೆ ತೀವ್ರ ಮುಖಭಂಗವಾಗಿದೆ. ಟ್ರಂಪ್ ಗೆಲುವಿಗೆ ಭಾರತದ ಪ್ರಧಾನಿ ಮೋದಿ ಎಕ್ಸ್ ಖಾತೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
2016-20ರಲ್ಲಿ ಟ್ರಂಪ್(Donald Trump) ಅಧ್ಯಕ್ಷರಾಗಿದ್ದರು. ನಂತರ ಜೋ ಬೆಡನ್ ಅಧ್ಯಕ್ಷರಾಗಿದ್ದರು. ಈಗ 2ನೇ ಬಾರಿಗೆ ಟ್ರಂಪ್ ಅಧ್ಯಕ್ಷರಾಗಿದ್ದಾರೆ. ಅಮೆರಿಕದ ಸಂವಿಧಾನದ ಪ್ರಕಾರ 2 ಬಾರಿ ಮಾತ್ರ ಅಧ್ಯಕ್ಷರಾಗಬಹುದು. 78 ವರ್ಷದ ಟ್ರಂಪ್ ಮತ್ತೊಮ್ಮೆ ಅಮೆರಿಕದ ಚುಕ್ಕಾಣಿ ಹಿಡಿದಿದ್ದು, ಭಾರತದ ಮೇಲೆ ಇದು ಮುಂದೆ ಯಾವ ರೀತಿ ಪರಿಣಾಮ ಬೀರುತ್ತೆ ಕಾದು ನೋಡಬೇಕು.