ಪ್ರಜಾಸ್ತ್ರ ಸುದ್ದಿ
ಫರೀದಾಬಾದ್(Faridabad): ಚಲಿಸುತ್ತಿದ್ದ ಖಾಸಗಿ ಆಂಬುಲೆನ್ಸ್ ನಲ್ಲಿ ಮಹಿಳೆಯೊಬ್ಬರು ಇಬ್ಬರು ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, 6 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಡಿಸೆಂಬರ್ 29ರ ಸಂಜೆ ಸಂತ್ರಸ್ತೆ ಫರೀದಾಬಾದ್ ಸೆಕ್ಟರ್ 23ರಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿ ಮಧ್ಯರಾತ್ರಿ ವಾಪಸ್ ಮನೆಗೆ ಹೊರಟಿದ್ದರು. ಎನ್ಐಟಿ-2 ಚೌಕ್ ತನಕ ಆಟೋದಲ್ಲಿ ಬಂದು ಅಲ್ಲಿಂದ ಮೆಟ್ರೋ ಚೌಕ್ ಗೆ ನಡೆದುಕೊಂಡು ಹೊರಟಿದ್ದರು. ಈ ವೇಳೆ ಆಂಬುಲೆನ್ಸ್ ನಲ್ಲಿ ಬಂದ ಆರೋಪಿಗಳು ಮನೆಗೆ ಬಿಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾರೆ. ಮಹಿಳೆ ಹೇಳಿದ ದಾರಿಗೆ ಹೋಗದೆ ಗುಡಗಾಂವ್ ನತ್ತ ಗಾಡಿ ಚಲಾಯಿಸಿದ್ದಾರೆ. ಚಲಿಸುತ್ತಿದ್ದ ಆಂಬುಲೆನ್ಸ್ ನಲ್ಲೇ ಅತ್ಯಾಚಾರವೆಸಗಿದ್ದಾರೆ. ನಸುಕಿನಜಾವ 3ರ ಸುಮಾರಿಗೆ ರಾಜಾ ಚೌಕ್ ಬಳಿ ಆಕೆಯನ್ನು ನೂಕಿ ಹೋಗಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ.




