ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಕೆಎಸ್ಆರ್ ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಅಮಾಯಕ ಮಕ್ಕಳಿಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ತಾಲೂಕಿನ ಕನಕಪುರ ಮುಖ್ಯ ರಸ್ತೆಯ ಅಚ್ಚಲು ಕ್ರಾಸ್ ಹತ್ತಿರ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ಪ್ರದೀಪ್(05) ಹಾಗೂ ಭವ್ಯ(03) ಮೃತ ಮಕ್ಕಳು. ಕನಕಪುರ ಕಡೆ ಹೊರಟಿದ್ದ ಬಸ್ ತಿರುವಿನಲ್ಲಿ ಎದುರಿಗೆ ಬಂದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ತಮಿಳುನಾಡಿನ ಡೆಂಕಣಿಕೋಟೆಯ ಬೋಕಸಂದ್ರ ಗ್ರಾಮದ ಭೈರಪ್ಪ ಎಂಬುವರು ತಮ್ಮ ಮಕ್ಕಳಿಬ್ಬರನ್ನು ಸಂಬಂಧಿಯಾದ ಗೋವಿಂದ್ ಅವರ ಮನೆಯಲ್ಲಿ ಬಿಟ್ಟಿದ್ದರು. ಇಂದು ಮುಂಜಾನೆ ಗೋವಿಂದ್ ಟಿವಿಎಸ್ ಎಕ್ಸಲ್ ಸ್ಕೂಟರ್ ನಲ್ಲಿ ಮಕ್ಕಳನ್ನು ಹಾಗೂ ಸ್ನೇಹಿತ ಮಧುನನ್ನು ಕರೆದುಕೊಂಡು ತಾವು ಕೆಲಸ ಮಾಡುತ್ತಿದ್ದ ಕೋಳಿ ಫಾರಂ ಕಡೆ ಹೊರಟಿದ್ದರು. ಗೋವಿಂದ್ ಹಾಗೂ ಮಧು ಗಂಭೀರವಾಗಿ ಗಾಯಗೊಂಡಿದ್ದಾರೆ.