ಪ್ರಜಾಸ್ತ್ರ ಸುದ್ದಿ
ಮಾಗಡಿ(Magadi): ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಹೊಸ ವರ್ಷದ ಮೊದಲ ದಿನವೇ ನಡೆದಿದೆ. ಇದರೊಂದಿಗೆ ತಾಲೂಕಿನಲ್ಲಿ ಬುಧವಾರ ಮುಂಜಾನೆ ಎರಡು ಪ್ರತ್ಯೇಕ ಪ್ರಕರಣಲ್ಲಿ ಮೂವರು ನಿಧನರಾಗಿದ್ದಾರೆ. ಟೀ ಕುಡಿಯುಲು ಏಳು ಸ್ನೇಹಿತರು ನಸುಕಿನಲ್ಲಿ ಕಾರಿನಲ್ಲಿ ಹೊರಟಿದ್ದರು. ಹೊಸಪಾಳ್ಯದ ಹತ್ತಿರ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಚೋಳನಾಯಕನಹಳ್ಳಿಯ ಮಂಜು(31) ಹಾಗೂ ಕಿರಣ್(30) ಮೃತ ದುರ್ದೈವಿಗಳು. ಗಾಯಗೊಂಡ ಐವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕಾರು ಹಲವು ಪಾರಿ ಪಲ್ಟಿಯಾದ ಪರಿಣಾಮ ನುಜ್ಜುಗುಜ್ಜಾಗಿದೆ.