ಪ್ರಜಾಸ್ತ್ರ ಸುದ್ದಿ
ಚಿಕ್ಕೋಡಿ(Chikkodi): ಗೂಡ್ಸ್ ವಾಹನ ಹಾಗೂ ಕಾರು ನಡುವೆ ಅಪಘಾತ(Accident) ಸಂಭವಿಸಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ನಾಗರಮುನ್ನೋಳ್ಳಿ ಹತ್ತಿರ ಶುಕ್ರವಾರ ತಡರಾತ್ರಿ ನಡೆದಿದೆ. ಬಾಗಲಕೋಟೆಯ ಜಿಲ್ಲೆಯ ಮುಧೋಳ ಪಟ್ಟಣದ ಇಬ್ಬರು ಮೃತಪಟ್ಟಿದ್ದಾರೆ. ಸೌರಭ ಕುಲ್ಕರ್ಣಿ(22) ಹಾಗೂ ರಾಕೇಶ್ ವಾಟಕರ್(23) ಮೃತ ಯುಕವರೆಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಪ್ಪಾಣಿ-ಮುಧೋಳ ರಾಜ್ಯ(State Highway) ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.