Ad imageAd image

ಮರಕ್ಕೆ ಲಾರಿ ಡಿಕ್ಕಿ, ಇಬ್ಬರ ಸಾವು

Nagesh Talawar
ಮರಕ್ಕೆ ಲಾರಿ ಡಿಕ್ಕಿ, ಇಬ್ಬರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ಅರಳಿಮರಕ್ಕೆ ಲಾರಿಯೊಂದು ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ನಾಗವಲ್ಲಿ ಹತ್ತಿರದ ಸೋಪನಹಳ್ಳಿ ಗೇಟ್ ಹತ್ತಿರ ಶನಿವಾರ ನಡೆದಿದೆ. ಕೇರಳ ಮೂಲದ ರಷೀದ್ ಅಲಿ(25) ಹಾಗೂ ಅಮೀನ್(23) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಆಂಧ್ರಪ್ರದೇಶದಿಂದ ಕೇರಳಕ್ಕೆ ಕಡಪ ಕಲ್ಲು ಸಾಗಿಸುತ್ತಿದ್ದರು. ರಂಗಾಪುರ ಹತ್ತಿರದ ಸೋಪನಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article