ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ಪುಟ್ಟ ಬಾಲಕಿಗೆ ಚಮಚದಿಂದ ಬರೆ ಹಾಕಿದ ಘಟನೆ ಜಿಲ್ಲೆಯ ಗುಲಗಾಲಜಂಬಗಿ ಗ್ರಾಮದಲ್ಲಿನ ಅಂಗನವಾಡಿಯಲ್ಲಿ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಶೋಭಾ ಹೊಳೆಪ್ಪನವರ ಹಾಗೂ ಸಹಾಯಕಿ ಶಾರವ್ವ ಪಂಚಗಾವಿ ವಿರುದ್ಧ ಬರೆ ಹಾಕಿದ ಆರೋಪ ಕೇಳಿ ಬಂದಿದ್ದು, ಇವರಿಬ್ಬರನ್ನು ಅಮಾನತು ಮಾಡಲಾಗಿದೆ. ಪ್ರೀತಿ ಎನ್ನುವ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಯಾವುದೋ ಕ್ಷುಲ್ಲಕ ಕಾರಣಕ್ಕೆ ಬಾಲಕಿಗೆ ಬಿಸಿ ಚಮಚದಿಂದ ಕೆನ್ನೆಗೆ ಬರೆ ಹಾಕಿದ್ದಾರೆ. ಬಾಲಕಿಗೆ ಲೋಕಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ಕಾರಣಕ್ಕೆ ಈ ರೀತಿ ವಿಕೃತಿ ಮೆರೆಯಲಾಗಿದೆ. ಯಾರು ಇದನ್ನು ಮಾಡಿದ್ದಾರೆ ಎನ್ನುವುದರ ಕುರಿತು ಇಲಾಖೆಯಿಂದ ಸೂಕ್ತ ತನಿಖೆಯಾಗಬೇಕು. ಮಗುವಿನ ಈ ರೀತಿ ಕ್ರೌರ್ಯ ಮೆರೆದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.