ಪ್ರಜಾಸ್ತ್ರ ಸುದ್ದಿ(Photo- @T20WorldCup)
ಕ್ವಾಲಾಲಂಪುರ(Kuala Lumpur): ಐಸಿಸಿ 19 ವರ್ಷದೊಳಗಿನ ಮಹಿಳಾ ಟಿ-20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ 2ನೇ ಬಾರಿಗೆ ವಿಶ್ವಚಾಂಪಿಯನ್(Champions) ಆಗಿದೆ. ಇಂಡಿಯಾ ಟೀಂ ಬರೋಬ್ಬರಿ 9 ವಿಕೆಟ್ ಅಂತರದಿಂದ ವಿಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ತನ್ನ ಬಳಿಯೇ ಉಳಿಸಿಕೊಂಡಿತು. ಕರ್ನಾಟಕದ ನಿಕಿ ಪ್ರಸಾದ್ ತಂಡದ ನಾಯಕಿಯಾಗಿ ಕಣಕ್ಕೆ ಇಳಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಸೌಥ್ ಆಫ್ರಿಕಾ ಬಳಕ 20 ಓವರ್ ಗಳಲ್ಲಿ 82 ರನ್ ಗಳಿಸಿ ಆಲೌಟ್ ಆಯಿತು. ಭಾರತ ಪರ ತೃಷಾ ಗೊಂಗಡಿ 3, ಆಯುಷಿ ಶುಕ್ಲಾ, ಪುರಾಣಿಕ ಸಿಸೋಡಿಯಾ ಹಾಗೂ ವೈಷ್ಣವಿ ಶರ್ಮಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಗುರಿಯನ್ನು ಭಾರತ 1 ವಿಕೆಟ್ ಕಳೆದುಕೊಂಡು 11.2 ಓವರ್ ಗಳಲ್ಲಿ ಮುಟ್ಟಿ ವಿಶ್ವ ಚಾಂಪಿಯನ್ ಆಯಿತು.
ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದಿದ್ದ ತೃಷಾ ಬ್ಯಾಟಿಂಗ್ ನಲ್ಲೂ ಅಬ್ಬರಿಸಿ 33 ಎಸೆತಗಳಲ್ಲಿ 44 ರನ್ ಗಳಿಸಿ ಅಜೇಯರಾಗಿ ಉಳಿದು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದಳು. ಸನಿಕ ಚಾಲ್ಕೆ ಅಜೇಯ 26 ರನ್ ಗಳಿಸಿದಳು. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದೆ ಭಾರತ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದ ಸೌಥ್ ಆಫ್ರಿಕಾ ಸೋಲು ಅನುಭವಿಸಿತು.