ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ಎಸೆದು ಗಲಾಟೆ ಮಾಡಿದ ಪ್ರಕರಣ ಸಂಬಂಧ 8 ಜನರನ್ನು ಬಂಧಿಸಲಾಗಿದೆ. ಯುವಕನೊಬ್ಬ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿನ್ನಲೆಯಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಫೋಟೋಗಳ ಮೇಲೆ ಮುಸ್ಲಿಂ ಧರ್ಮಗುರುಗಳ ಸಾಲುಗಳನ್ನು ಬರೆದು ಅವಮಾನ ಮಾಡಿದ ಸಂಬಂಧ ಎರಡು ದಿನಗಳ ನಡೆದ ಗಲಾಟೆಯ ವೇಳೆ ಪೊಲೀಸ್ ಠಾಣೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ರಾಜೀವ ನಗರದ ಸಾದಿಕ್ ಪಾಷಾ, ಅರ್ಬಾಜ್ ಶರೀಫ್, ಶಾಂತಿನಗದ ಸುಹೇಲ್, ಅಯಾನ್, ರಹೀಲ್, ಸತ್ಯನಗರದ ಎಜಾಜ್, ಗೌಸಿಯಾ ನಗರದ ಶೋಹೇಬ್ ಪಾಷಾ, ಸೈಯದ್ ಸಾದಿಕ್ ಎನ್ನುವ 8 ಆರೋಪಿಗಳನ್ನು ಬಂಧಿಸಲಾಗಿದೆ. ಕಲ್ಲು ಎಸೆದವರಲ್ಲಿ 15 ರಿಂದ 20 ವರ್ಷದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರಂತೆ. ಮುಫ್ತಿ ಮುಸ್ತಾಕ್ ಮಕ್ಬೋಲಿ ಎಂಬಾತ ಘಟನೆ ನಡೆದ ದಿನ ಪ್ರಚೋದನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಆತನ ಪತ್ತೆಗೂ ಬಲೆ ಬೀಸಲಾಗಿದೆ.