ಪ್ರಜಾಸ್ತ್ರ ಸುದ್ದಿ
ಬೆಳ್ತಂಗಡಿ(Beltangadi): ಸೌಜನ್ಯ ಕುಟುಂಬಸ್ಥರು ಉದಯಕುಮಾರ್ ಜೈನ್ ಸೇರಿ ಹಲವರ ವಿರುದ್ಧ ಆರೋಪ ಮಾಡಿದ್ದು, ಉದಯಕುಮಾರ್ ಜೈನ್, ಧೀರಜ್ ಕೆಲ್ಲ ಹಾಗೂ ಮಲ್ಲಿಕ್ ಜೈನ್ ಅವರನ್ನು ವಿಚಾರಣೆಗೆ ಎಸ್ಐಟಿ ಕರೆದಿತ್ತು. ಇದೀಗ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ಸೌಜನ್ಯ ಪ್ರಕರಣದ ತನಿಖೆಯನ್ನು ಸದ್ದಿಯಿಲ್ಲದೆ ನಡೆಸುತ್ತಿದೆಯಾ ಅನ್ನೋ ಕುತೂಹಲ ಮೂಡಿದೆ.
ನೂರಾರು ಸಾವುಗಳು ನಡೆದಿವೆ ಎನ್ನುವ ಸಾಕ್ಷಿ ದೂರುದಾರ ಚಿನ್ನಯ್ಯನ ಆರೋಪದ ಹಿನ್ನಲೆಯಲ್ಲಿ ಎಸ್ಐಟಿ ರಚನೆಯಾಗಿದೆ. ಅದರ ತನಿಖೆಯ ನಡೆವೆ ಸೌಜನ್ಯ ಪ್ರಕರಣದ ತನಿಖೆಯೂ ನಡೆಯುತ್ತಿದ್ಯಾ ಎನ್ನುವ ಪ್ರಶ್ನೆ ಮೂಡಿದೆ. ಯಾಕಂದ್ರೆ, ನ್ಯಾಯಾಲಯದ ಅಂಗಳಕ್ಕೆ ಹೋಗಿ ಬಂದಿದೆ. ಇದರಲ್ಲಿ ಸರ್ಕಾರ ಮೌನವಾಗಿತ್ತು. ಈಗ ಗೌಪ್ಯವಾಗಿ ಮತ್ತೆ ತನಿಖೆ ನಡೆಸಲಾಗುತ್ತಿದೆ ಎನ್ನುವ ಅನುಮಾನ ಮೂಡಿದೆ.