ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕ ಉದಿತ್ ನಾರಾಯಣ್(Udit Narayan) ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಲೇ ಯುವತಿಯರಿಗೆ ಮುತ್ತು (Kiss)ಕೊಟ್ಟಿದ್ದು, ಲಿಪ್ ಕಿಸ್(Lip Kiss) ಕೊಟ್ಟಿರುವುದು ವಿವಾದಕ್ಕೆ ಇಡಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಗಾಯಕ ಉದಿತ್ ನಾರಾಯಣ್ ಹಾಡುತ್ತಿರುವಾಗ ಅಭಿಮಾನಿಗಳು ಸೆಲ್ಫಿ ತೆಗೆದಕೊಳ್ಳಲು ವೇದಿಕೆ ಹತ್ತಿರ ಬರುತ್ತಾರೆ. ಆಗ ಹಾಡುತ್ತಲೇ ಅವರ ಕೆನ್ನೆಗೆ, ತುಟಿಗೆ ಮುತ್ತು ಕೊಡುತ್ತಾರೆ. ಅಲ್ಲಿದ್ದವರು ಸಹ ಇದಕ್ಕೆ ಶಿಳ್ಳೆ, ಚಪ್ಪಾಳೆ ತಟ್ಟುತ್ತಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಗಾಯಕ ಈ ರೀತಿ ನಡೆದುಕೊಂಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಎದ್ದಿವೆ. ಅನೇಕರು ಅನೇಕ ರೀತಿಯಿಂದ ಟ್ವೀಟ್ ಮಾಡಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮ್ಮನ್ನು ಪ್ರೀತಿಯಿಂದ ಮಾತನಾಡಿಸಿದವರಿಗೆ ಮುತ್ತು ಕೊಟ್ಟಿದ್ದೇನೆ. ನಾನೇನು ಮೊದಲಲ್ಲ. ಈ ಹಿಂದೆ ಹಲವು ಸೆಲೆಬ್ರಿಟಿಗಳು ಹೀಗೆ ಮಾಡಿದ್ದಾರೆ. ನನ್ನ ಹಾಗೂ ನನ್ನ ಅಭಿಮಾನಿಗಳ ನಡುವಿನ ಪ್ರೀತಿ ಯಾವಾಗಲೂ ಪರಿಶುದ್ಧವಾಗಿರುತ್ತೆ. ಇದನ್ನು ಅನಗತ್ಯ ವಿವಾದ ಮಾಡಲಾಗುತ್ತಿದೆ ಎಂದಿದ್ದಾರೆ.