ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಉದ್ಯಮಿಯೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ದೂಪದಕಟ್ಟಿ ಹತ್ತಿರ ನಡೆದಿದೆ. ಆರ್.ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ ಎಂದು ತಿಳಿದು ಬಂದಿದೆ. ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷ ಸುಭೀತ್ ಸಹೋದರ ಈ ಆರ್.ದಿಲೀಪ್ ಆಗಿದ್ದಾರೆ. ಕರ್ಕಾಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನಲ್ಲಿ ದಿಲೀಪ್ ಉದ್ಯಮ ನಡೆಸುತ್ತಿದ್ದಾರೆ. ಮಂಗಳವಾರ ನಸುಕಿನಜಾವ ತಾಲೂಕಿನ ನಿಟ್ಟೆಯ ದೂಪದಕಟ್ಟಿ ಹೆದ್ದಾರಿ ಹತ್ತಿರದ ಎಸ್ಟೇಟ್ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಕಾರಣಕ್ಕೆ ಈ ರೀತಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.