ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶದ ಹಲವು ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಛತ್ತೀಸಗಡ, ಮಧ್ಯಪ್ರದೇಶ, ಒಡಿಶಾ, ಬಿಹಾರ, ಜಾರ್ಖಂಡ್, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನಕ್ಸಲ್ ರ(Naxalism) ಹಾವಳಿ ಜೋರಾಗಿದೆ. ಹೀಗಾಗಿ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಗುರುವಾರ ಹಾಗೂ ಶುಕ್ರವಾರ ಛತ್ತೀಸಗಡದ ದಂತೇವಾಡ ಹಾಗೂ ನಾರಾಯಣಪುರ ಜಿಲ್ಲೆಯ ಗಡಿ ಭಾಗವಾದ ಬಸ್ತರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ 31 ನಕ್ಸಲ್ ರನ್ನು(Naxalites) ಹತ್ಯೆ ಮಾಡಿದ್ದಾರೆ. ಇದೆಲ್ಲದರ ನಡುವೆ ಕೇಂದ್ರ ಗೃಹ ಸಚಿವರು ಸಭೆ ನಡೆಸಿದ್ದು, ನಕ್ಸಲ್ ಚಟುವಟಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ನಕ್ಸಲ್ ಚಟುವಟಿಕೆ ಸಧ್ಯ ಯಾವ ಹಂತದಲ್ಲಿದೆ, ಬೇರು ಸಮೇತ ಕಿತ್ತೆಸೆಯಲು ಏನೆಲ್ಲ ಮಾಡಬಹುದು ಎನ್ನುವುದರ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.