ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆರು ತಿಂಗಳೋ ಐದು ವರ್ಷವೋ ನೋಡೋಣ. ಎಷ್ಟು ದಿನ ಇರುತ್ತಾರೆ ಇರಲಿ. ಮುಂದೆ ಯಾರು ಬರುತ್ತಾರೆ ಅನ್ನೋದು ಚುನಾವಣೆಯಲ್ಲಿ ನೋಡೋಣ. ಆದರೆ, ಈ ಸರ್ಕಾರ ಹೋದರೆ ಜನರಿಗೆ ನೆಮ್ಮದಿ ಎಂದು ಕಿಡಿ ಕಾರಿದರು.
ಇನ್ನು ಅನಧಿಕೃತ ಬಡಾವಣೆಯಲ್ಲಿ ಕಟ್ಟಿದ ಮನೆ, ನಿವೇಶನಗಳಿಗೆ ಬಿ ಖಾತಾ ಕೊಡಲು ತರಾತುರಿ ಯಾಕೆ. ಖಾಜನೆಯಲ್ಲಿ ಹಣ ಇಲ್ಲ. ಅದಕ್ಕೆ ಅಕ್ರಮ ಸಕ್ರಮ ಎನ್ನುತ್ತಿದ್ದಾರೆ. ಇದರಲ್ಲಿ ಸ್ಪಷ್ಟತೆ ಇಲ್ಲ. ಖಜಾನೆ ಖಾಲಿಯಾಗಿದೆ. ಅದನ್ನು ತುಂಬಿಸಿಕೊಳ್ಳಲು ನೋಡುತ್ತಿದ್ದಾರೆ. ಇವರು ಕೊಡುತ್ತಿರುವ ಗ್ಯಾರಂಟಿಗಳಿಗೆ ಕೊಡುತ್ತಿರುವುದು ಯಾರಪ್ಪನ ಮನೆಯ ದುಡ್ಡು ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು. ಇಲ್ಲಿ ಸಿಎಂ ಸ್ಥಾನ ಇರುವುದು ರೆಕಾರ್ಡ್ ಬ್ರೇಕ್ ಮಾಡಲು ಅಲ್ಲ. ಜನರಿಗೆ ಏನು ಕೊಟ್ಟಿದ್ದೇವೆ ಅನ್ನೋದು ಮುಖ್ಯವೆಂದು ಹೇಳುವ ಮೂಲಕ ಸಚಿವ ಹೆಚ್.ಸಿ ಮಹಾದೇವಪ್ಪ ಮಾತಿಗೆ ಟಾಂಟ್ ಕೊಟ್ಟರು.